ಅಶೆಂ ಜಾಲೆಂ ಕಶೆಂ.. ಸಿನೆಮಾ ಉದ್ಘಾಟನೆ
ಉಡುಪಿ, ಎ.22: ‘ಅಶೆಂ ಜಾಲೆಂ ಕಶೆಂ.. ಇಂಚಾ ಆಂಡಾ ಎಂಚಾ’ ಕೊಂಕಣಿ ತುಳು ಸಿನಿಮಾ ಉಡುಪಿ ಸಂತೆಕಟ್ಟೆಯ ಆರ್ಶೀವಾದ ಥಿಯೇಟರ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.
ಕಾರ್ಯಕ್ರಮವನ್ನು ಉಡುಪಿ ಶೋಕಾಮಾತಾ ಇಗರ್ಜಿಯ ಧರ್ಮಗುರು ವಂ.ಫ್ರೆಡ್ ಮಾಸ್ಕರೇನಸ್ ಉದ್ಘಾಟಿಸಿದರು. ಉದ್ಯಮಿ ಜೆರಿ ವಿನ್ಸೆಂಟ್ ಡಯಾಸ್, ನಿರ್ಮಾಪಕ ಮ್ಯಾಕ್ಸಿಮ್ ಪಿರೇರಾ, ಧರ್ಮಗುರು ಫಾ.ಹೆನ್ರಿ ಆಳ್ವ ಕೆನಡಾ, ದಾಯ್ಜಿವರ್ಲ್ಡ್ ಮಾಧ್ಯಮದ ನಿರ್ದೇಶಕ ಕಿಶೋರ್ ಗೊನ್ಸಾಲ್ವೀಸ್, ಕಲಾವಿದರಾದ ಆಲ್ವೀನ್ ಅಂದ್ರಾದೆ, ಸಹ ನಿರ್ಮಾಪಕ ಅನಿಲ್ ಡಿಮೆಲ್ಲೊ, ಮತ್ತು ಪ್ರೊ.ವಿನ್ಸೆಂಟ್ ಆಳ್ವ ಉಪಸ್ಥಿತರಿದ್ದರು.
Next Story





