ಅಸಲು ಪಾವತಿಸಿದರೆ ಬಡ್ಡಿ ಮನ್ನಾ : ರಾಜ್ಯ ಸರಕಾರ ಆದೇಶ
ಜೂ.30ರ ವರೆಗೆ ಅವಧಿ ವಿಸ್ತರಣೆ
.jpg)
ಬೆಂಗಳೂರು, ಎ. 22: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಮೂಲಕ ರೈತರ ಪಡೆದಿರುವ ಅಲ್ಪಾವಧಿ, ಮಾಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲದ ಅಸಲನ್ನು ಮರುಪಾತಿಸಿದರೆ ಬಡ್ಡಿ ಮನ್ನಾ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ರೈತರು ಕಂತನ್ನು ಮಾ.31ರೊಳಗೆ ಮರುಪಾವತಿಸಲು ಆದೇಶ ಹೊರಡಿಸಿತ್ತು, ಆ ಬಳಿಕ ಎ.15ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿತ್ತು. ಇದೀಗ ಜೂನ್ 30ರ ವರೆಗೆ ಅಸಲನ್ನು ಮರುಪಾವತಿ ಮಾಡಿದರೆ ಅಂತಹ ರೈತರಿಗೆ ಬಡ್ಡಿ ಮನ್ನಾ ಲಾಭವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Next Story





