ಅಹ್ಮದ್ ಖುರೇಶಿ ದೌರ್ಜನ್ಯ ಆರೋಪ : ಸಿಐಡಿಯಿಂದ ಮುಂದುವರಿದ ತನಿಖೆ
ಮಂಗಳೂರು, ಎ.22: ಕೊಲೆ ಯತ್ನ ಪ್ರಕರಣದ ಆರೋಪಿ ಅಹ್ಮದ್ ಖುರೇಶಿಯನ್ನು ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ನಗರಕ್ಕೆ ಆಗಸಮಿಸಿರುವ ಸಿಐಡಿ ಎಸ್ಪಿ ಸಿರಿಗೌರಿ ನೇತೃತ್ವದ ತಂಡ ಶನಿವಾರವೂ ವಿಚಾರಣೆಯನ್ನು ನಡೆಸಿದೆ.
ಶುಕ್ರವಾರ ಆಗಮಿಸಿದ್ದ ಸಿಐಡಿ ತಂಡ ಎನ್‌ಎಂಪಿಟಿ ಗೆಸ್ಟ್‌ಹೌಸ್‌ನಲ್ಲಿ ತನಿಖೆಯನ್ನು ಆರಂಭಿಸಿದ್ದು, ಖುರೇಶಿಯ ಹಿರಿಯ ಸಹೋದರ ನಿಶಾದ್‌ರನ್ನು ವಿಚಾರಣೆ ನಡೆಸಿದೆ. ಶನಿವಾರವೂ ನಿಶಾದ್‌ರ ವಿಚಾರಣೆಯನ್ನು ನಡೆಸಿರುವ ತಂಡವು ಪ್ರರಕಣಕ್ಕೆ ಸಂಬಂಧಿಸಿ ಮತ್ತಷ್ಟು ಜನರನ್ನು ವಿಚಾರಣೆಗೆ ಒಳಪಡಿಸಲಿದ್ದು, ನಂತರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ. ಖುರೇಶಿ ಪ್ರಕರಣವನ್ನು ಸರಕಾರ ಎಪ್ರಿಲ್ 17ರಂದು ಸಿಐಡಿ ತನಿಖೆಗೆ ವಹಿಸಿತ್ತು.
Next Story





