ಕೆಂಡ ಹಾಯುವ ಆಚರಣೆ : 19 ಮಂದಿಗೆ ಗಾಯ

ತಿರುವರೂರ್, ಎ.22: ತಮಿಳುನಾಡಿನ ತೆಂಕುಡಿಯಲ್ಲಿರುವ ಮಾರಿಯಮ್ಮ ದೇವಸ್ಥಾನದಲ್ಲಿ ಕೆಂಡ ಹಾಯುವ ಆಚರಣೆ ವೇಳೆ ಕೆಂಡದ ರಾಶಿಗೆ ಜಾರಿ ಬಿದ್ದು 19 ಮಂದಿ ಗಾಯಗೊಂಡಿದ್ದಾರೆ.
ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಈ ದೇವಸ್ಥಾನದಲ್ಲಿ ಭಕ್ತರು ಕೆಂಡ ಹಾಯುವ (ಕೆಂಡದ ರಾಶಿಯ ಮೇಲೆ ನಡೆಯುವ )ಹರಕೆ ಹೊರುತ್ತಾರೆ. ಅದರಂತೆ ಕೆಂಡ ಹಾಯುತ್ತಿದ್ದ ಭಕ್ತರ ಸಾಲಿನಲ್ಲಿದ್ದ ಓರ್ವ ಆಯ ತಪ್ಪಿ ಕೆಳಗಿದ್ದ ಕೆಂಡದ ಹೊಂಡಕ್ಕೆ ಬಿದ್ದಿದ್ದಾನೆ. ಆತನ ಹಿಂದಿನಿಂದ ಬರುತ್ತಿದ್ದವರೂ ಆಯತಪ್ಪಿ ಆತನ ಮೇಲೆಯೇ ಬಿದ್ದಿದ್ದಾರೆ. ಘಟನೆಯಲ್ಲಿ ಒಟ್ಟು 19 ಮಂದಿ ಗಾಯಗೊಂಡಿದ್ದ ಮೂವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





