ಎ. 24: ಅಡ್ಯಾರ್ ಕಣ್ಣೂರ್ ಬಳಿಯ ಬಲ್ಲೂರು ಗುಡ್ಡೆಯಲ್ಲಿ ಸಲಫಿ ಸಮಾವೇಶ
ಮಂಗಳೂರು,ಎ.22: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಹಮ್ಮಿಕೊಂಡಿರುವ ಕುರ್‍ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಮ್.ನ ಅಡ್ಯಾರ್ ಕಣ್ಣೂರ್ ಘಟಕದ ವತಿಯಿಂದ ಎ. 24 ರಂದು ಸಂಜೆ ಗಂಟೆ 5 ಕ್ಕೆ ಅಡ್ಯಾರ್ ಕಣ್ಣೂರ್ ಬಳಿಯ ಬಲ್ಲೂರು ಗುಡ್ಡೆಯಲ್ಲಿ ಸಲಫಿ ಸಮಾವೇಶವು ಜರಗಲಿದೆ. ಕಣ್ಣೂರು ಸಲಫಿ ಮಸೀದಿಯ ಖತೀಬ್ ಮೌಲವಿ ಮುಹಮ್ಮದ್ ರಫೀಕ್ ಕಾಸಿಮಿ ಮತ್ತು ಹಿರಿಯ ವಿದ್ವಾಂಸ ಚುಯೆಲಿ ಅಬ್ದುಲ್ಲಾ ಮುಸ್ಲಿಯಾರ್‍ರವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆಂದು ಘಟಕದ ಅಧ್ಯಕ್ಷ ಅಹ್ಮದ್ ಬಾವಾ ಕಣ್ಣೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





