Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಕಸದ ತೊಟ್ಟಿ ನನ್ನ ಸ್ವಾಭಿಮಾನದ ಸಂಕೇತ!

ಕಸದ ತೊಟ್ಟಿ ನನ್ನ ಸ್ವಾಭಿಮಾನದ ಸಂಕೇತ!

ಚೇಳಯ್ಯಚೇಳಯ್ಯ22 April 2017 11:33 PM IST
share
ಕಸದ ತೊಟ್ಟಿ ನನ್ನ ಸ್ವಾಭಿಮಾನದ ಸಂಕೇತ!

ತಾನು ಬಿಜೆಪಿಯಲ್ಲಿದ್ದೇನೋ? ಇಲ್ಲವೋ? ಎಂದು ಗೊಂದಲದಲ್ಲಿರುವ ಸದ್ಯಕ್ಕೆ ಬಳಸಿ ಎಸೆಯಲ್ಪಟ್ಟ ಬಾಳೆಯೆಲೆಯೂ ಆಗಿರುವ ಶ್ರೀನಿವಾಸ ಪ್ರಸಾದ್ ಅವರು ತಮ್ಮ ನಿವಾಸದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದರು. ಅಂದು ಯಾವ ಪತ್ರಿಕಾಗೋಷ್ಠಿಯೂ ಇಲ್ಲದ ಕಾರಣ, ಒಮ್ಮೆ ಶ್ರೀನಿವಾಸ ಪ್ರಸಾದ್ ಅವರನ್ನು ಮಾತನಾಡಿಸಿಕೊಂಡು ಬರುವ ಎಂದು ಪತ್ರಕರ್ತ ಎಂಜಲು ಕಾಸಿ ಅವರ ಮನೆ ಬಾಗಿಲು ತಟ್ಟಿದ.

ಒಳಗೆ ಕೂತಿರುವ ಶ್ರೀನಿವಾಸ ಪ್ರಸಾದ್ ಅವರಿಗೆ ಒಮ್ಮೆಲೆ ಆಶಾವಾದ. ನರೇಂದ್ರ ಮೋದಿ ಇರಬಹುದೇ? ಚುನಾವಣೆಯಲ್ಲಿ ಸೋತು ಹೋಗಿರುವ ತನ್ನನ್ನು ಸಂತೈಸುವುದಕ್ಕೆ ದಿಲ್ಲಿಯಿಂದ ಬಂದಿರಬಹುದೇ? ಎಂದು ಆಸೆಯಿಂದ ಬಾಗಿಲು ತೆರೆದರು. ನೋಡಿದರೆ ಪತ್ರಕರ್ತ ಎಂಜಲು ಕಾಸಿ. ಶ್ರೀನಿವಾಸ ಪ್ರಸಾದ್‌ರಿಗೆ ಉರಿದು ಹೋಯಿತು.

‘‘ಈಗ ಯಾಕ್ರೀ ಬಂದಿರಿ? ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ನನ್ನ ಇಂಟರ್ಯೂ ಮಾಡಿ ಎಂದು ಹತ್ತು ಬಾರಿ ಫೋನ್ ಮಾಡಿದೆ...ನಿಮ್ಮ ಪತ್ತೆ ಇರಲಿಲ್ಲ....’’ ಮಾಜಿ ಸಚಿವ, ಮಾಜಿ ಕಾಂಗ್ರೆಸಿಗ, ಹಾಲಿ ಬಿಜೆಪಿಗ ಶ್ರೀನಿವಾಸ ಪ್ರಸಾದ್ ಹೇಳಿದರು.

‘‘ಇಲ್ಲ ಸಾರ್...ನಾನು ಬಂದಿದ್ದೆ. ಬಿಜೆಪಿಯೋರೇ ನನ್ನನ್ನು ಒಳಗೆ ಬಿಡಲಿಲ್ಲ. ಅವರ ಬದಲಿಗೆ ನಮ್ಮನ್ನು ಇಂಟರ್ಯೂ ಮಾಡಿ ಎಂದು ಯಡಿಯೂರಪ್ಪ, ಈಶ್ಪರಪ್ಪ ಗುದ್ದಾಟ ಆರಂಭಿಸಿದರು ಸಾರ್. ಅದಿರ್ಲಿ ಸಾರ್...ನೀವು ಹೇಗೆ ಸೋತ್ರೀ...?’’ ಕಾಸಿ ಕೇಳಿದ.

‘‘ಇನ್ನು ಹ್ಯಾಗೆ? ಮತಯಂತ್ರದ ದುರ್ಬಳಕೆಯಾಗಿದೆ ಕಣ್ರೀ....ಸಿದ್ದರಾಮಯ್ಯ ಅವರು ಮತಯಂತ್ರವನ್ನು ದುರ್ಬಳಕೆ ಮಾಡಿದ್ದಾರೆ. ಯಾರು ಮತ ಹಾಕಿದರೂ ಅದು ಹೋಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೀಳುತ್ತಿತ್ತು....’’ ಶ್ರೀನಿವಾಸ ಪ್ರಸಾದ್ ಹೇಳಿದರು.

‘‘ಸಾರ್...ನೀವು ಅಂಬೇಡ್ಕರ್‌ರನ್ನು ದುರ್ಬಳಕೆ ಮಾಡಿರುವುದೇ ಚುನಾವಣೆಯ ಸೋಲಿಗೆ ಕಾರಣ ಎಂದು ಕೆಲವು ಜನ ಹೇಳುತ್ತಾರಲ್ಲ...?’’ ಕಾಸಿ ಕೆಣಕಿದ.
‘‘ಅದೆಲ್ಲ ಸಿದ್ದರಾಮಯ್ಯ ಅವರ ಕಡೆಯೋರು ಹಬ್ಬಿಸಿದ ಸುಳ್ಳು ಕಣ್ರೀ...ಅಂಬೇಡ್ಕರ್ ಚಿಂತನೆಯ ಮೇಲೆ ಬಲವಾಗಿ ನಂಬಿಕೆಯಿರುವ ಬಿಜೆಪಿ ಸೇರಿರುವುದು ಅವರ ಹೊಟ್ಟೆಕಿಚ್ಚಿಗೆ ಕಾರಣ...’’ ಶ್ರೀನಿವಾಸ ಪ್ರಸಾದ್ ಹೇಳಿದರು.

‘‘ಬಿಜೆಪಿಗೆ ಅಂಬೇಡ್ಕರ್ ಸಿದ್ಧಾಂತದ ಮೇಲೆ ನಂಬಿಕೆ ಇದೆಯಾ ಸಾರ್?’’ ಕಾಸಿ ಗೊಂದಲದಿಂದ ಕೇಳಿದ.

‘‘ನೋಡ್ರೀ...ಅಂಬೇಡ್ಕರ್ ಮೀಸಲಾತಿಯನ್ನು ಘೋಷಿಸಿದ್ದು ಸಂವಿಧಾನ ಬರೆದ ಸಂದರ್ಭದಲ್ಲಿ. ಆದರೆ ಬಿಜೆಪಿಯ ಕಡೆಯೋರು ಅದನ್ನು ಶತಮಾನಗಳ ಹಿಂದೆಯೇ ಘೋಷಿಸಿದ್ದರು. ಉದ್ಯೋಗಗಳಲ್ಲಿ ಶೇ. 75ರಷ್ಟನ್ನು ದಲಿತರಿಗೇ ಮೀಸಲಾಗಿಟ್ಟಿದ್ದರು...ಇದು ಅಂಬೇಡ್ಕರ್ ಸಿದ್ಧಾಂತವೇ ಅಲ್ಲವೇ?’’
‘‘ಸಾರ್...ಆದರೆ ಅದು ಮಲ ಬಳಿಯುವ, ಕಸ ಗುಡಿಸುವ, ಮೇಲ್ವರ್ಗದ ಚಾಕರಿ ಮಾಡುವ... ಉದ್ಯೋಗ ಸಾರ್...’’ ಕಾಸಿ ಹೇಳಲು ಹೊರಟ.

‘‘ನೋಡ್ರೀ...ಕಾಂಗ್ರೆಸ್‌ನಲ್ಲಿರುವ ನಾಯಕರು ಈಗ ಮಾಡುತ್ತಿರುವುದಾದರೂ ಏನು? ವರಿಷ್ಠರ ಚಾಕರಿ ತಾನೇ? ಹಾಗಿರುವಾಗ ಬಿಜೆಪಿಯವರದು ಏನು ತಪ್ಪು? ಬಿಜೆಪಿಯೋರ ಮೀಸಲಾತಿ ಜಾರಿಗೆ ಬಂದರೆ, ದಲಿತರು ನಿರುದ್ಯೋಗಿಗಳಾಗುವುದು ತಪ್ಪುತ್ತದೆ. ಎಲ್ಲ ಶೌಚಾಲಯಗಳ, ಬೀದಿ ಗುಡಿಸುವ ಕೆಲಸ ಮತ್ತೆ ದಲಿತರಿಗೇ ದಕ್ಕುತ್ತದೆ. ಪಾಪ ಮೇಲ್‌ಜಾತಿಯೋರು ಅದೇನೋ ಕಂಪ್ಯೂಟರ್ ಕುಟ್ಟುತ್ತಾ ಪರದೇಶಿಗಳಾಗಿ ಅಮೆರಿಕದಲ್ಲಿ ಆ ಟ್ರಂಪ್‌ನ ಕಾಲಡಿಯಲ್ಲಿ ಸೇವೆ ಮಾಡುತ್ತಾ ಬಿದ್ದಿರಬೇಕಾಗುತ್ತದೆ....ನಾನು ಗೆದ್ದಿದ್ದರೆ ಈ ದೇಶದ ದಲಿತರ ಸ್ವಾಭಿಮಾನದ ಗೆಲುವಾಗಿತ್ತು. ಇದೀಗ ನನ್ನ ಸೋಲು ಇಡೀ ದಲಿತರ ಸೋಲಾಗಿದೆ. ದಲಿತರ ಇಂದಿನ ಎಲ್ಲ ಸಂಕಷ್ಟಗಳಿಗೆ ನಾನು ಚುನಾವಣೆಯಲ್ಲಿ ಸೋತದ್ದೇ ಕಾರಣ...’’ ಶ್ರೀನಿವಾಸ ಪ್ರಸಾದ್ ಕೆಮ್ಮುತ್ತಾ ನುಡಿದರು.
‘‘ಸಾರ್...ಚುನಾವಣೆಯ ಸೋಲಿನ ಅನಂತರವೂ ತಾವು ಬಿಜೆಪಿಯಲ್ಲಿದ್ದೀರಾ?’’ ಕಾಸಿ ಅನುಮಾನದಿಂದ ಕೇಳಿದ.

‘‘ಹೌದು. ಯಾಕ್ರೀ ಅನುಮಾನ...?’’

‘‘ಹಾಗಲ್ಲ ಸಾರ್? ಈಗ ಯಾವ ಬಿಜೆಪಿ ನಾಯಕರೂ ನಿಮ್ಮ ಮನೆಯ ಅಂಗಳವನ್ನೂ ತುಳಿಯುತ್ತಿಲ್ಲವಲ್ಲ?’’

‘‘ಹಾಗೇನಿಲ್ಲ...ನನ್ನನ್ನು ಸಮಾಧಾನ ಪಡಿಸೋದಕ್ಕೆ ಸ್ವತಃ ನರೇಂದ್ರ ಮೋದಿಯವರೇ ರಾಜ್ಯಕ್ಕೆ ಆಗಮಿಸುವವರಿದ್ದರು. ಆದರೆ ಅವರು ಫಾರಿನ್ ಟೂರ್‌ನಲ್ಲಿ ರೋದರಿಂದ, ಅವರ ಪರವಾಗಿ ಬೇರೆಯವರನ್ನು ಕಳುಹಿಸಿದ್ದಾರೆ....’’

‘‘ಬೇರೆಯವರು ಎಂದರೆ?’’

‘‘ಬೇರೆಯವರು ಎಂದರೆ...ಯಾರಾದರೇನೂ ....ಸದ್ಯಕ್ಕೆ ಸ್ಥಳೀಯ ಗ್ರಾಮಪಂಚಾಯತ್ ಮಟ್ಟದ ಕಾರ್ಯಕರ್ತರೊಬ್ಬರನ್ನು ತನ್ನ ಪರವಾಗಿ ಕಳುಹಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದರು. ಯಾರಾದರೇನು....ಮೋದಿಯನ್ನು ಪ್ರತಿನಿಧಿಸುತ್ತಾರೆ ಎಂದ ಮೇಲೆ ಸಾಕ್ಷಾತ್ ಮೋದಿಯೇ ಬಂದ ಹಾಗೆ....’’
‘‘ಸಾರ್...ನಿಮಗೆ ದಲಿತರೇ ಮತ ಹಾಕಲಿಲ್ಲ ಯಾಕೆ ಸಾರ್?’’ ಕಾಸಿ ಗಾಯಕ್ಕೆ ಉಪ್ಪು ಸವರಿದ.

‘‘ದಲಿತರೆಲ್ಲ ಸ್ವಾಭಿಮಾನ ಕಳೆದುಕೊಂಡಿದ್ದಾರೆ. ಅದಕ್ಕೆ ನನಗೆ ಮತ ಹಾಕಲಿಲ್ಲ.... ’’ ಶ್ರೀನಿವಾಸ ಪ್ರಸಾದ್ ಖೇದದಿಂದ ಹೇಳಿದರು.

‘‘ಸರ್ ನಿಮಗೆ ಮತ ಹಾಕಿದ್ದರೆ ಅವರ ಸ್ವಾಭಿಮಾನ ಮತ್ತೆ ಸಿಗುತ್ತಿತ್ತೆ?’’ ಕಾಸಿ ಕೇಳಿದ.

‘‘ಖಂಡಿತ. ನಾನು ಗೆದ್ದಿದ್ದರೆ ಪೇಜಾವರ ಶ್ರೀಗಳು ಖುದ್ದಾಗಿ ಅವರ ಬಳಿಗೆ ಬಂದು ತಮ್ಮ ಪಾದವನ್ನು ತೊಳೆಯಲು ದಲಿತರಿಗೆ ಅವಕಾಶ ಕೊಡುತ್ತಿದ್ದರು. ಈಗ ಆ ಅವಕಾಶವನ್ನು ಕಳೆದುಕೊಂಡರು’’

‘‘ಸಾರ್...ಆರೆಸ್ಸೆಸ್‌ನೋರು ಉಣ್ಣುವುದಕ್ಕೆ ಬಾಳೆಯೆಲೆ ಕಡಿಮೆ ಬಿತ್ತೆಂದು ನಿಮ್ಮನ್ನು ಸೇರಿಸಿಕೊಂಡರಂತೆ ಹೌದೇ?’’

‘‘ದೇಶಪ್ರೇಮಿ ಆರೆಸ್ಸೆಸ್‌ನೋರು ಉಣ್ಣುವುದಕ್ಕೆ ಬಾಳೆಯೆಲೆಯಾಗಲು ನನಗೆ ಹೆಮ್ಮೆಯಿದೆ. ಅದು ನನ್ನ ಸ್ವಾಭಿಮಾನದ ಸಂಕೇತ...ಕಣ್ರೀ...’’ ಶ್ರೀನಿವಾಸ ಪ್ರಸಾದ್ ಆಕ್ರೋಶದಿಂದ ಹೇಳಿದರು.

‘‘ಆದರೆ ಉಂಡ ಬಳಿಕ ನಿಮ್ಮನ್ನು ಕಸದ ತೊಟ್ಟಿಗೆ ಹಾಕಿದ್ದಾರಲ್ಲ ಸಾರ್?’’ ಕಾಸಿ ಆತಂಕದಿಂದ ಕೇಳಿದ.

‘‘ಸದ್ಯಕ್ಕೆ ಈ ರಾಜ್ಯದ ಎಲ್ಲ ಕಸದ ತೊಟ್ಟಿಯ ಹೊಣೆಗಾರಿಕೆ ನನಗೆ ಕೊಟ್ಟಿದ್ದಾರೆ. ನಾನು ಸೋತರೂ ಹೊಣೆಗಾರಿಕೆಯನ್ನು ನನಗೆ ಕೊಟ್ಟಿರುವುದು ಬಿಜೆಪಿಯ ನಾಯಕರ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಈಗಾಗಲೇ ಕಾಂಗ್ರೆಸ್ ಜೆಡಿಎಸ್‌ನಿಂದ ಬಹಳಷ್ಟು ಬಾಳೆಯೆಲೆಗಳು ಬಿಜೆಪಿಗೆ ಬರುತ್ತಿವೆ. ಆದುದರಿಂದ ಬಿಜೆಪಿಯಲ್ಲಿ ಕಸದ ತೊಟ್ಟಿಗೆ ಬಹಳ ಘನತೆ ಗೌರವಗಳಿವೆ. ಆ ಸ್ಥಾನವನ್ನು ವಹಿಸಿಕೊಂಡಿರುವುದಕ್ಕೆ ನನಗೆ ಹೆಮ್ಮೆಯಿದೆ. ಕಸದ ತೊಟ್ಟಿ ನನ್ನ ಸ್ವಾಭಿಮಾನದ ಸಂಕೇತ...’’ ಎನ್ನುತ್ತಿದ್ದಂತೆಯೇ ಎಂಜಲು ಕಾಸಿ ಮೂಗು ಮುಚ್ಚಿ ಅಲ್ಲಿಂದ ಓಡತೊಡಗಿದ.

share
ಚೇಳಯ್ಯ
ಚೇಳಯ್ಯ
Next Story
X