ನಾವೂರು ದಲಿತ ಕಾಲನಿಗಿಲ್ಲ ಅಭಿವೃದ್ಧಿ ಭಾಗ್ಯ
.jpg)
ಸುಳ್ಯ, ಎ.22: ಸ್ವಾತಂತ್ರ ಬಂದು ಏಳು ದಶಕಗಳೇ ಕಳೆ ದಿವೆ. ಕೇಂದ್ರ-ರಾಜ್ಯ ಸರ್ಕಾರಗಳು ದಲಿತರ ಕಲ್ಯಾಣ ಕ್ಕೆಂದು ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿ ತಂದಿವೆ. ಆದರೆ ಸುಳ್ಯ ನಗರದ ಬಳಿ ಇರುವ ನಾವೂರಿನ ದಲಿತ ಕಾಲನಿಯ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಶೋಚನಿಯ ಬದುಕು ಸಾಗಿಸುತ್ತಿದ್ದರೂ ಯಾರು ಇತ್ತ ಗಮನ ಹರಿಸಿಲ್ಲ.
ನಾವೂರು ತಾಲೂಕು ಕೇಂದ್ರದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ. ಇಲ್ಲಿನ ಡಿ.ಸಿ. ಮನ್ನಾ ಜಾಗ ವಾಗಿರುವ ಈ ದಲಿತ ಕಾಲನಿ ಅಂದಾಜು 7 ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ಈ ಪೈಕಿ ಅರ್ಧಕ್ಕಿಂತ ಹೆಚ್ಚು ಭಾಗ ಮೇಲ್ವರ್ಗದವರ ಪಾಲಾಗಿದೆ. ಈಗ 3 ಎಕರೆ ಮಾತ್ರ ದಲಿತರ ವಶದಲ್ಲಿದ್ದು, ಒಟ್ಟು 50 ಕುಟುಂಬಗಳು ಇಲ್ಲಿ ನೆಲೆಸಿವೆ. ಬಹುತೇಕ ಮನೆಗಳು ಹಳೆಯದಾಗಿದ್ದು ಹೊಸತಾಗಿ ಅಥವಾ ಕನಿಷ್ಠ ರಿಪೇರಿ ಮಾಡಿಸಿಕೊಳ್ಳುವಷ್ಟು ಅವರು ಅಶಕ್ತರಾಗಿದ್ದರೆ.
ದಾಖಲೆಗಳಿಲ್ಲ: ಅನೇಕ ದಲಿತ ಮನೆಯವರು ಸರಕಾರಿ ಸವಲತ್ತುಗಳನ್ನು ಪಡೆಯಲು ಬೇಕಾಗಿರುವ ಹಕ್ಕುಪತ್ರ, ಮತದಾನ ಗುರುತುಪತ್ರ, ರೇಶನ್ ಕಾರ್ಡ್, ಆಧಾರ್ ನಂತಹ ದಾಖಲೆಗಳನ್ನೇ ಹೊಂದಿಲ್ಲ.
ತೆರೆದ ಬಾವಿ ಇಲ್ಲ, ಬೋರ್‌ವೆಲ್ ಸರಿಪಡಿಸಿಲ್ಲ: ನಪಂ ನೀರಿನ ಸಂಪರ್ಕ ಹೊರತಾಗಿ ಇಲ್ಲಿ ಕನಿಷ್ಠ ಒಂದು ತೆರೆದ ಬಾವಿಯೂ ಇಲ್ಲವಾಗಿದೆ. ಶಾಶ್ವತವಾದ ಬಾವಿಯಾಗಲಿ, ಬೋರಿನ ವ್ಯವಸ್ಥೆಯಾಗಲಿ ಇಲ್ಲ. ಈ ಹಿಂದೆ ಬೋರ್‌ವೆಲ್ ಕೊರೆದಿದ್ದರೂ, ಇದೀಗ 30 ವರ್ಷಗಳಿಂದ ಉಪಯೋಗವಿಲ್ಲದೆ ಮುಚ್ಚಲಾಗಿದೆ. ಇದನ್ನು ದುರಸ್ತಿಪಡಿಸುವಂತೆ ಮನವಿ ಮಾಡಿದ್ದರೂ ಇದುವರೆಗೆ ಸರಿಪಡಿಸಿಲ್ಲ. ಕಳೆದ ಬೇಸಿಗೆಯಲ್ಲಿ ನೀರಿನ ಕೊರತೆಯಾಗಿತ್ತು. ಆಗ ಅಧಿಕಾರಿಗಳು ಬೇರೆಡೆಗೆ ಬೋರ್‌ನಿಂದ ನೀರು ಪೂರೈಸಲು ಮುಂದಾದಾಗ ಕಾಲನಿ ಯವರು, ಇಲ್ಲಿ ನಮ್ಮ ಅಗತ್ಯತೆಗೆ ಸ್ಪಂದಿಸಿ ಬಳಿಕ ಕೊಂಡೊಯ್ಯಿರಿ ಎಂದು ಎಚ್ಚರಿಸಿದ್ದರು. ಆ ಸಂದರ್ಭ ಬಿಟ್ಟುಹೋದ ಅಧಿಕಾರಿಗಳು ಇದುವರೆಗೂ ಸರಿ ಪಡಿಸಲು ಸ್ಪಂದಿಸಿಲ್ಲ ಎಂದು ಇಲ್ಲಿನ ಜನತೆ ದೂರಿದ್ದಾರೆ.
ಹಲವರು ನಿವೇಶನರಹಿತರು: ಖಾತೆಗೆ ಜಾಗ ಸರಿಯಾಗಿ ವರ್ಗಾವಣೆಗೊಂಡಿಲ್ಲ. 35 ಮನೆಗಳಿಗೆ ಪಹಣಿ ಪತ್ರ ಇಲ್ಲ. ಇದುವರೆಗೆ ಪಹಣಿಪತ್ರ ಸಮರ್ಪ ಕವಾಗಿ ದೊರೆತಿರುವುದು ಕೇವಲ 10 ಮನೆಗಳಿಗೆ ಮಾತ್ರ . ಕೆಲವು ಕುಟುಂಬಗಳಲ್ಲಿ ಹಿರಿಯರ ಸಾವಿನ ಬಗ್ಗೆ ದಾಖಲೆಗಳಿಲ್ಲದೇ ಆರ್‌ಟಿಸಿ ಮಕ್ಕಳ ಹೆಸರಿಗೆ ವರ್ಗಾವಣೆಯಾಗುತ್ತಿಲ್ಲ. ಕಂದಾಯ ಅದಾಲತ್ ಆಗಲಿ: ಇಲ್ಲಿನ ನಿವಾಸಿಗಳು ಆಧಾರ್ , ರೇಷನ್ ಕಾರ್ಡ್, ಮರಣಪತ್ರ, ಖಾತೆ ಬದ ಲಾವಣೆ ಮತ್ತಿತರ ದಾಖಲೆಗಳಿಗಾಗಿ ಅನೇಕ ಬಾರಿ ತಾಲೂಕು ಕಚೇರಿಗಳಿಗೆ ಅಲೆದಾಡಿ ಸೋತು ಹೋಗಿ ದ್ದಾರೆ. ಕಂದಾಯ ಸಚಿವರಿಂದಲೇ ಇದಕ್ಕೆ ಒತ್ತಡ ಬರುವ ಮೂಲಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಅದಾಲತ್ ನಡೆದು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು. ತಾಲೂಕು ಮಟ್ಟದ ಅಧಿ ಕಾರಿಗಳಿಂದ ಸಮಸ್ಯೆ ನಿವಾರಣೆ ಅಸಾಧ್ಯ ಎಂಬುದು ಇಲ್ಲಿನವರ ಅಭಿಪ್ರಾಯ.
ಡಿಸಿ ಮನ್ನಾ ಜಾಗ ಇಂದು ಪರಾಧೀನವಾಗಿದೆ. ಹಿಂದೆ ಹೋರಾಟವಾಗಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಈ ಬಗ್ಗೆ ತನಿಖೆಯಾಗಬೇಕು. ಇದರೊಂದಿಗೆ ಇಲ್ಲಿನ ಕುಟುಂಬಗಳ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತ ಮುಂದಾಗಬೇಕು
*ಕಂಜಲ
ಮಾಜಿ ನ.ಪಂ. ಸದಸ್ಯ, ಕಾಲನಿ ನಿವಾಸಿ
ಅತಿಕ್ರಮಣಕ್ಕೆ ಬೇಕು ಮುಕ್ತಿ
ದಲಿತ ಕಾಲನಿಯ 4 ಎಕರೆಯಷ್ಟು ಜಾಗ ಅತಿಕ್ರ ಮಣಗೊಂಡು ಮೇಲ್ವರ್ಗದವರ ಪಾಲಾಗಿದೆ. ಅತಿಕ್ರಮಣಗೊಂಡ ಸ್ಥಳದಲ್ಲಿ ಸುಸಜ್ಜಿತ ಮನೆ ಗಳು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಅಲ್ಲದೆ ಅತಿಕ್ರಮಣ ಮಾಡಿಕೊಂಡವರು ರಸ್ತೆಗೆ ಅಡ್ಡಿಪಡಿಸುತ್ತಿದ್ದಾರೆ. ನೀರಿನ ಟ್ಯಾಂಕ್‌ಗೆ ಹಾನಿ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಕಾಲನಿ ನಿವಾಸಿಗಳ ಮನೆಯ ಪರಿಸರದಲ್ಲಿ ದುರ್ನಾತ ಬೀರುವ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ.
ಹಲವಾರು ಮಂದಿ ಕಾಲನಿ ನಿವಾಸಿಗಳಿಗೆ ಮುಂದೆ ಬರಲು ಇಚ್ಛಾಶಕ್ತಿ ಇಲ್ಲ. ವಿದ್ಯುತ್ ಸಂಪರ್ಕ, ಗ್ಯಾಸ್ ಮತ್ತಿತರ ವ್ಯವಸ್ಥೆ ಮಾಡಿ ದ್ದೇನೆ. ಆದರೆ 94 ಸಿಯಲ್ಲಿ ಅರ್ಜಿ ಸಲ್ಲಿಸಲು ಹೇಳಿದ್ದರೂ ಮುಂದೆ ಬರುತ್ತಿಲ್ಲ. ಇಲ್ಲಿ ನೀರಿನ ಸಮಸ್ಯೆ ಇಲ್ಲ. ನಪಂನಿಂದ ನಳ್ಳಿ ನೀರಿನ ವ್ಯವಸ್ಥೆ ಮಾಡಿದ್ದೇವೆ.
*ಗೋಕುಲ್‌ದಾಸ್
ನಪಂ ವಾರ್ಡ್ ಸದಸ್ಯ







