ನಿಲಯ ಮೇಲ್ವಿಚಾರಕ ಹುದ್ದೆ: ನಿವೃತ್ತ ನೌಕರರಿಗೆ ಅವಕಾಶ
ಮಂಗಳೂರು, ಎ.22: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವಿದ್ಯಾರ್ಥಿ ನಿಲಯಗಳಲ್ಲಿ ಪ್ರಸಕ್ತ ಖಾಲಿ ಇರುವ ನಿಲಯ ಮೇಲ್ವಿಚಾರಕರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇರೆಗೆ ತಾತ್ಕಾಲಿಕವಾಗಿ ತುಂಬಲು ಇಲಾಖೆಯು ಉದ್ದೇಶಿಸಿದೆ. ಅದರನ್ವಯ ಬಿ.ಎಡ್. ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರುವ 63 ವಯೋಮಿತಿ ಮೀರಿರದ ವಿದ್ಯಾರ್ಥಿ ನಿಲಯಗಳ ನಿವೃತ್ತ ನಿಲಯ ಮೇಲ್ವಿಚಾರಕರು/ನಿಲಯ ಪಾಲಕರು ಹಾಗೂ ನಿವೃತ್ತ ಶಿಕ್ಷಕ/ಶಿಕ್ಷಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು ಮತ್ತು ಪಿಂಚಣಿ ಆದೇಶದ ಪ್ರತಿಯೊಂದಿಗೆ ಸ್ವ-ಪರಿಚಯದ ಲಿಖಿತ ವಿವರಗಳೊಂದಿಗೆ ಮೇ 7ರ ಒಳಗಾಗಿ ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆನೆಗುಂಡಿ ರೋಡ್, ಬಿಜೈ-ಕಾಪಿಕಾಡ್‌ಗೆ ಸಲ್ಲಿಸುವಂತೆ ಪ್ರಕಟನೆ ತಿಳಿಸಿದೆ.
Next Story





