ರಾಷ್ಟ್ರೀಯ ಪ್ರಶಸ್ತಿಗಳ ಪ್ರಸಕ್ತತೆಯನ್ನು ಪ್ರಶ್ನಿಸಿದ ರಾಮ ಗೋಪಾಲ ವರ್ಮಾ

ಮುಂಬೈ,ಎ.23: ಖ್ಯಾತ ಬಾಲಿವುಡ್ ನಿರ್ಮಾಪಕ-ನಿರ್ದೇಶಕ ರಾಮ ಗೋಪಾಲ ವರ್ಮಾ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಪ್ರಶಸ್ತಿ ಪ್ರದಾನ ಸಮಾರಂಭಗಳ ಪ್ರಸಕ್ತತೆಯನ್ನು ಪ್ರಶ್ನಿಸಿದ್ದಾರೆ. ತನ್ನ ವಾದಕ್ಕೆ ಸಮರ್ಥನೆಯಾಗಿ ಖ್ಯಾತ ನಟ ಆಮಿರ್ ಖಾನ್‌ರನ್ನು ಅವರು ಉದಾಹರಿಸಿದ್ದಾರೆ.
ಆಮಿರ್‌ರನ್ನು ದೇಶದ ‘ಮಹಾನ್ ಚಿತ್ರ ಸೃಷ್ಟಿಕಾರ ’ಎಂದು ಟ್ವಿಟರ್‌ನಲ್ಲಿ ಪ್ರಶಂಸಿಸಿರುವ ವರ್ಮಾ,ಇಂತಹ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅವರ ನಿರಂತರ ಅನುಪಸ್ಥಿತಿ ಇಂದು ಅವು ಎಷ್ಟು ಮಹತ್ವವನ್ನು ಹೊಂದಿವೆ ಎನ್ನುವುದನ್ನು ತೋರಿಸುತ್ತದೆ ಎಂದಿದ್ದಾರೆ.
ಪ್ರಶಸ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉತ್ತಮ ಚಿತ್ರಗಳನ್ನು ನೀಡುವುದನ್ನು ಮುಂದುವರಿಸಿರುವುದಕ್ಕಾಗಿ ಆಮಿರ್‌ರನ್ನು ಅವರು ಹೊಗಳಿದ್ದಾರೆ.
ಇತ್ತೀಚಿಗೆ ನಟ ಅಕ್ಷಯ ಕುಮಾರ್ ಅವರು ‘ರುಸ್ತುಂ ’ಚಿತ್ರದಲ್ಲಿ ತನ್ನ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದನ್ನು ಹಲವರು ಪ್ರಶ್ನಿಸಿದ್ದರು.
Next Story