ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಉಳ್ಳಾಲ, ಎ.23: ಕೈಕಾಲು ತೊಳೆಯಲು ಸಮುದ್ರಕ್ಕಿಳಿದಿದ್ದ ವೇಳೆ ನೀರುಪಾಲಾಗಿದ್ದ ಮಾಸ್ತಿಕಟ್ಟೆ ನಿವಾಸಿ ಮುಹಮ್ಮದ್ ಹನೀಫ್ ರ ಮೃತದೇಹ ಮುಕ್ಕಚ್ಷೇರಿ ಸೀಗ್ರೌಂಡ್ ಸಮೀಪ ಪತ್ತೆ ಪತ್ತೆಯಾಗಿದೆ.
ವೃತ್ತಿಯಲ್ಲಿ ಪೈಂಟರ್ ಆಗಿದ್ದ ಮುಹಮ್ಮದ್ ಹನೀಫ್ ಇಂದು ಬೆಳಗ್ಗೆ ಉಳ್ಳಾಲದ ಸಿ ಗ್ರೌಂಡ್ ನಲ್ಲಿ ಕ್ರಿಕೆಟ್ ಆಡಿದ ನಂತರ ಕೈಕಾಲು ತೊಳೆಯಲು ಸಮುದ್ರಕ್ಕೆ ತೆರಳಿದ್ದರು. ಈ ಸಂದರ್ಭ ಕಾಲುಜಾರಿ ನೀರುಪಾಲಾಗಿದ್ದರು. ಹನೀಫ್ ಅವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಮುಕ್ಕಚ್ಷೇರಿ ಸೀಗ್ರೌಂಡ್ ಸಮೀಪ ಅವರ ಮೃತದೇಹ ಪತ್ತೆಯಾಗಿದೆ.
ಸಂತಾಪ: ಕೈಕಾಲು ತೊಳೆಯುವ ಸಂದರ್ಭ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಹನೀಫ್ ನಿಧನಕ್ಕೆ ಆಹಾರ ಸಚಿವ ಯು.ಟಿ.ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





