Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಈ ಹೊತ್ತಿನ ಹೊತ್ತಿಗೆ

ಈ ಹೊತ್ತಿನ ಹೊತ್ತಿಗೆ

ಗುಜರಾತ್ ಫೈಲುಗಳು ಅಗೆದಷ್ಟೂ ಆಳ...

-ಕಾರುಣ್ಯಾ-ಕಾರುಣ್ಯಾ23 April 2017 11:18 PM IST
share
ಈ ಹೊತ್ತಿನ ಹೊತ್ತಿಗೆ

ಗುಜರಾತ್ ಫೈಲುಗಳೆಂದರೆ ಅಗೆದಷ್ಟೂ ಆಳ. ಮುಟ್ಟಿದಲ್ಲಿ ಗಾಯಗಳು. ಕಾಲಿಟ್ಟಲ್ಲಿ ಸತ್ಯದ ತಲೆಬುರುಡೆಗಳು. ಸಂವಿಧಾನದ ಅಸ್ಥಿಪಂಜರಗಳು. ಪತ್ರಕರ್ತನೊಬ್ಬ ಬರೆದಷ್ಟೂ ಮುಗಿಯದ ರುದ್ರ ಕಥಾನಕ ಅದು. ಪೊಲೀಸ್ ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಸಾಹಿತಿಗಳು, ಚಿಂತಕರು ಗುಜರಾತ್ ಹತ್ಯಾಕಾಂಡದ ಕುರಿತಂತೆ ಬರೆದುದಕ್ಕೆ ಲೆಕ್ಕವಿಲ್ಲ. ಆದರೆ ಬರೆದು ಮುಗಿದಿದೆ ಎನ್ನುವಂತೆಯೂ ಇಲ್ಲ. ಇದೀಗ ಇನ್ನೊಂದು ಗುಜರಾತ್ ಫೈಲ್ ಖ್ಯಾತ ಪತ್ರಕರ್ತೆ, ಅಂಕಣಗಾರ್ತಿ ರಾಣಾ ಅಯ್ಯೂಬ್ ಮೂಲಕ ತೆರೆದಿದೆ. 

ಲಂಕೇಶ್ ಪ್ರಕಾಶನ ಈ ಕೃತಿಯನ್ನು ಹೊರಗೆ ತಂದಿದೆ. ಹಿರಿಯ ಬರಹಗಾರರಾಗಿರುವ ಶ್ರೀನಿವಾಸ್ ಕಾರ್ಕಳ ಅವರು ಇದನ್ನು ಕನ್ನಡಕ್ಕಿಳಿಸಿದ್ದಾರೆ. ‘ಗುಜರಾತ್ ಫೈಲುಗಳು-ಮುಚ್ಚಿ ಹಾಕುವ ಹುನ್ನಾರದ ಒಳನೋಟಗಳು’’ ಹೆಸರೇ ತಿಳಿಸುವಂತೆ ಗುಜರಾತ್ ಗಲಭೆಗಳು, ನಕಲಿ ಎನ್‌ಕೌಂಟರ್‌ಗಲು ಮತ್ತು ಬೆಚ್ಚಿ ಬೀಳಿಸುವಂತಹ ಸತ್ಯ ಗಳನ್ನು ಮುನ್ನೆಲೆಗೆ ತಂದ, ಗೃಹಮಂತ್ರಿ ಹರೇನ್ ಪಾಂಡ್ಯನ ಹತ್ಯೆ ಇತ್ಯಾದಿಗಳ ಬಗ್ಗೆ ಪತ್ರಕರ್ತೆ ರಾಣಾ ಅಯ್ಯೂಬ್ ಎಂಟು ತಿಂಗಳ ಕಾಲ ಮಾರುವೇಷದಲ್ಲಿ ನಡೆಸಿದ ಕಾರ್ಯಾಚರಣೆಯ ಕಥಾನಕ.

ಖಾದಿ ಮತ್ತು ಖಾಕಿ ಜೊತೆ ಸೇರಿದರೆ ಮಾನವತೆಯ ಮೇಲೆ ಅದೆಷ್ಟು ಬರ್ಬರವಾದ ಹಲ್ಲೆಗಳು ನಡೆಯ ಬಹುದು ಎನ್ನುವುದನ್ನು ರಾಣಾ ಅಯ್ಯೂಬ್ ಅವರು ತಮ್ಮ ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದ್ದಾರೆ. ಅವರು ವಿವಿಧ ಅಧಿಕಾರಿಗಳನ್ನು ರಾಜಕಾರಣಿಗಳನ್ನು ಸಂದರ್ಶನ ಮಾಡಿದಾಗ ರಹಸ್ಯವಾಗಿ ದಾಖಲಿಸಲಾದ ವೀಡಿಯೊಗಳೇ ಈ ರಕ್ತಸಿಕ್ತ ಫೈಲುಗಳ ಪುಟಗಳನ್ನು ನಮಗೆ ತೆರೆದಿಡುತ್ತದೆ.


‘ಒಬ್ಬ ಒಳ್ಳೆಯ ಪತ್ರಕರ್ತ ಯಾವತ್ತೂ ವರದಿಯಿಂದ ಕಳಚಿಕೊಂಡು ವ್ಯಾವಹಾರಿಕವಾಗಿ ವರ್ತಿಸುವ ಕಲೆಯನ್ನು ರೂಢಿಸಿಕೊಂಡಿರಬೇಕು’ ಎನ್ನುವುದು ಎಲ್ಲ ಸಂಪಾದಕೀಯ ವಿಭಾಗಗಳಲ್ಲೂ ವರದಿಗಾರರಿಗೆ ಕಲಿಸುವ ಮೊದಲ ಪಾಠ. ಆದರೆ ಆ ಪಾಠವನ್ನು, ಆ ಕಲೆಯನ್ನು ಮೈಗೂಡಿಸಲು ಸಾಧ್ಯವಾಗದ ಕಾರಣದಿಂದಲೇ, ಇಂತಹದೊಂದು ಮಾನವೀಯ ವರದಿಯನ್ನು ವೈಯಕ್ತಿಕ ಆಸಕ್ತಿಯ ಮೇಲೆ ರಾಣಾ ಅಯ್ಯೂಬ್‌ಗೆ ಬಹಿರಂಗಪಡಿ ಸಲು ಸಾಧ್ಯವಾಗಿದೆ. ಇದು ಕೇವಲ ವರದಿಯಲ್ಲ, ಒಂದು ರೀತಿಯ ಪಯಣ. ಭೂಗತವಾಗಿರುವ ಸತ್ಯದ ಹೆಜ್ಜೆಗುರುತುಗಳನ್ನು ಹುಡು ಕುತ್ತಾ ಹೊರಡುವ ಪತ್ರಕರ್ತೆಯ ಸಾಹಸ ಯಾತ್ರೆ. ಹೋರಾಟ. ಆಕೆಯ ಒಳಗಿನ ಸಂಕಟ. 186 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 080-26676427 ದೂರವಾಣಿ ಯನ್ನು ಸಂಪರ್ಕಿಸಬಹುದು.

 
     

 
     


 
     

share
-ಕಾರುಣ್ಯಾ
-ಕಾರುಣ್ಯಾ
Next Story
X