ಹಂಪನಕಟ್ಟೆ: ಶೀಘ್ರ ಆರಂಭಗೊಳ್ಳಲಿದೆ ‘ಶಿಲ್ಪಾಹೆಲ್ತ್‌ಕೇರ್ ಸೆಂಟರ್’
ಮಂಗಳೂರು, ಎ.23: ತಜ್ಞ ವೈದ್ಯರನ್ನೊಳಗೊಂಡ ‘ಶಿಲ್ಪಾಹೆಲ್ತ್‌ಕೇರ್ ಸೆಂಟರ್ ಪಾಲಿಕ್ಲಿನಿಕ್’ ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನ ಹೊಸ ಕಟ್ಟಡದ ಮೊದಲನೆ ಮಹಡಿಯಲ್ಲಿ ಶೀಘ್ರ ಶುಭಾರಂಭಗೊಳ್ಳಲಿದೆ. ಇದರಲ್ಲಿ ತಜ್ಞ ವೈದ್ಯರಿಗೆ ಕ್ಲಿನಿಕ್ ಸ್ಪೇಸ್ ಬಾಡಿಗೆಗೆ ಲಭ್ಯ ಇವೆ ಎಂದು ಸಂಸ್ಥೆಯ ಪ್ರವರ್ತಕ ಸನ್ನಿ ಜಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿರುವ ‘ಶಿಲ್ಪಾಹೆಲ್ತ್‌ಕೇರ್ ಸೆಂಟರ್’ ಕೇಂದ್ರೀಕೃತ ಹವಾನಿಯಂತ್ರಿತವಾಗಿದ್ದು, ಅತ್ಯಾಧುನಿಕ ಸೌಲಭ್ಯ ಹಾಗೂ ಪೀಠೋಪಕರಣದಿಂದ ಕೂಡಿದೆ.
ನಗರದ ಹೃದಯಭಾಗದಲ್ಲಿರುವ ಈ ಪಾಲಿಕ್ಲಿನಿಕ್‌ಗೆ ಬರುವ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ವಿಶಾಲ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಪಾಲಿ ಕ್ಲಿನಿಕ್‌ಗೆ ಸಮೀಪದಲ್ಲೇ ಶೀತಲ್ ಮೆಡಿಕಲ್ ಮತ್ತು ಸರ್ಜಿಕಲ್ ಸೆಂಟರ್ ಕಾರ್ಯಾರಂಭಿಸಲಿವೆ.
‘ಶಿಲ್ಪಾಹೆಲ್ತ್‌ಕೇರ್ ಸೆಂಟರ್’ನಲ್ಲಿ ಒಂದೇ ಸೂರಿನಡಿ ಎಲ್ಲ ರೀತಿಯ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ಜನರಲ್ ಫಿಸಿಶಿಯನ್, ಕಾರ್ಡಿಯೊಲಾಜಿಸ್ಟ್, ಕಾರ್ಡಿಯೊಥೊರಾಸಿಕ್ ಸರ್ಜನ್ಸ್, ನ್ಯೂರೊಲಾಜಿಸ್ಟ್, ನ್ಯೂರೊಸರ್ಜನ್ಸ್, ಗ್ಯಾಸ್ಟ್ರೊ ಅಂಟಿರೋಲಾಜಿಸ್ಟ್, ನೆಫ್ರಾಲಾಜಿಸ್ಟ್, ಯುರೋಲಾಜಿಸ್ಟ್, ಅಂಕಾಲಾಜಿಸ್ಟ್, ಸೈಕಾಟ್ರಿಸ್ಟ್, ಗೈನಾಕಾಲಾಜಿಸ್ಟ್ ಮುಂತಾದ ಎಲ್ಲಾ ರೀತಿಯ ವಿಶೇಷ ಪರಿಣಿತ ತಜ್ಞರು ಸಿಗಲಿದ್ದಾರೆ.
sheetalguidlines@gmail.com ಪಾಲಿಕ್ಲಿನಿಕಿನಲ್ಲಿ ಅತ್ಯಾಧುನಿಕ ಸೌಲಭ್ಯಗಳಾದ ಫಾರ್ಮಸಿ, ಮೆಡಿಕಲ್ ಲ್ಯಾಬೊರೇಟರಿ, ಡಿಜಿಟಲ್ ಎಕ್ಸ್‌ರೇ, ಅಲ್ಟ್ರಾಸೌಂಡ್, ಕಲರ್‌ಡಾಪ್ಲರ್, ಎಕೊ ಮತ್ತು ಮೈನರ್ ಓಟಿ ಸೌಕರ್ಯಗಳಿದ್ದು, ಕೆಪೆಟೇರಿಯಾ ಸೌಲಭ್ಯ ಇಲ್ಲಿ ಇರಲಿದೆ. ಆಸಕ್ತರು ಶಿಲ್ಪಾಹೆಲ್ತ್‌ಕೇರ್ ಸೆಂಟರ್, ನೆಲಮಹಡಿ, ಮಿಲಾಗ್ರಿಸ್ ಹೊಸ ಕಾಂಪ್ಲೆಕ್ಸ್, ಹಂಪನ್‌ಕಟ್ಟೆ, ಮಂಗಳೂರು, ಸಂಪರ್ಕಿಸುವಂತೆ ಸನ್ನಿ ಜಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







