ವಿಮಾನ ತುರ್ತು ಭೂಸ್ಪರ್ಶ: ಕಲ್ಯಾಣ್ ಸಿಂಗ್ ಅಪಾಯದಿಂದಪಾರು
ಲಕ್ನೊ, ಎ. 24: ವಿಮಾನದ ತಾಂತ್ರಿಕ ತೊಂದರೆಯಿಂದಾಗಿ ರಾಜಸ್ತಾನ ರಾಜ್ಯಪಾಲ ಕಲ್ಯಾಣ್‌ಸಿಂಗ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಜೈಪುರದಿಂದ ಅವರು ಲಕ್ನೊಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ತಾಂತ್ರಿಕ ತೊಂದರೆಯಿಂದಾಗಿ ವಿಮಾನವನ್ನು ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
ವಿಮಾನದ ಲ್ಯಾಂಡಿಂಗ್ ಗೇರ್ ತೆರೆದುಕೊಳ್ಳದ್ದರಿಂದ ವಿಮಾನ ಆಕಾಶದಲ್ಲಿಯೇ ಸುಮಾರು ಒಂದೂವರೆಗಂಟೆಕಾಲ ಸುತ್ತು ಹೊಡೆದಿದ್ದು,ಕೊನೆಗೂ ಪೈಲೆಟ್ ಭೂಸ್ಪರ್ಶಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನ ನಿಲ್ದಾಣದ ನಿರ್ದೇಶಕ ಪ್ರದೀಪ್ ಕುಮಾರ್, ಖಾಸಗಿ ವಿಮಾನ ಸಿ 56 ಎಕ್ಸ್‌ನ ಲ್ಯಾಂಡಿಂಗ್ ಗೇರ್ ಹಾಳಾಗಿ ಹಾರಾಟಕ್ಕೆ ಸಮಸ್ಯೆಯುಂಟಾಗಿತ್ತು. ಆದ್ದರಿಂದವಿಮಾನವನ್ನು ನಿನ್ನೆ ಸಂಜೆ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಮಾನದಲ್ಲಿ ರಾಜಸ್ತಾನ ರಾಜ್ಯಪಾಲ ಕಲ್ಯಾಣ ಸಿಂಗ್ ಸಹಿತ 11 ಮಂದಿ ಪ್ರಯಾಣಿಕರು ಮತ್ತು ಪೈಲೆಟ್‌ಗಳ ತಂಡ ಇತ್ತು. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪ್ರದೀಪ್ ಕುಮಾರ್ ಹೇಳಿದ್ದಾರೆ.