Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎ.27-30: ಮುಹಿಮ್ಮಾತ್ ಸಿಲ್ವರ್ ಜುಬಿಲಿ,...

ಎ.27-30: ಮುಹಿಮ್ಮಾತ್ ಸಿಲ್ವರ್ ಜುಬಿಲಿ, ತ್ವಾಹಿರ್ ತಂಙಳ್ ಉರೂಸ್ ಸಮಾರಂಭ

ವಾರ್ತಾಭಾರತಿವಾರ್ತಾಭಾರತಿ24 April 2017 2:00 PM IST
share
ಎ.27-30: ಮುಹಿಮ್ಮಾತ್ ಸಿಲ್ವರ್ ಜುಬಿಲಿ, ತ್ವಾಹಿರ್ ತಂಙಳ್ ಉರೂಸ್ ಸಮಾರಂಭ

ಕಾಸರಗೋಡು, ಎ.24: ಪುತ್ತಿಗೆಯಲ್ಲಿರುವ ಮುಹಿಮ್ಮಾತ್ ವಿದ್ಯಾಸಂಸ್ಥೆಯ ಸಿಲ್ವರ್ ಜುಬಿಲಿ ಸಮ್ಮೇಳನ ಹಾಗೂ ಮುಹಿಮ್ಮಾತ್ ಸ್ಥಾಪಕ ಸೈಯದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 11ನೆ ಉರೂಸ್ ಮುಬಾರಕ್ 27 ರಿಂದ 30 ನೇ ತಾರೀಕಿನವರೆಗೆ ಪುತ್ತಿಗೆ ಮುಹಿಮ್ಮಾತಿನಲ್ಲಿ ನಡೆಯಲಿದೆ

ಕಾಸರಗೋಡಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಸೈಯದ್ ಇಬ್ರಾಹೀಂ ಪೂಕುಂಞಿ ತಂಙಳ್ ಅಲ್ ಹೈದ್ರೋಸಿ ಕಲ್ಲಕಟ್ಟ ಈ ವಿಷಯ ತಿಳಿಸಿದರು.

ಖತ್ಮುಲ್ ಕುರ್‌ಆನ್, ಉದ್ಘಾಟನಾ ಸಮ್ಮೇಳನ, ಅಹ್ಲು ಬೈತ್ ಅಧ್ಯಯನ, ರಾತೀಬ್, ಮೌಲಿದ್ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ದ್ಸಿಕ್ರ್ ಹಲ್ಕ, ಸಾಂಘಿಕ ಸಮ್ಮೇಳನ, ಆದರ್ಶ ಅದ್ಯಯನ, ಹಳೆ ವಿದ್ಯಾರ್ಥಿ ಸಂಗಮ, ಉಲಮಾ ಸಮ್ಮೇಳನ, ಸನದುದಾನ ಸಮ್ಮೇಳನ, ಮುಂತಾದ ಬೃಹತ್ ಕಾರ್ಯಕ್ರಮಗಳು ನಡೆಯಲಿದೆ. ಎ.27ರಂದು ಳಗ್ಗೆ ಸಮಾರೋಪ ಕಾರ್ಯಕ್ರಮಗಳು ಔಪಚಾರಿಕವಾಗಿ ಪ್ರಾರಂಭಗೊಳ್ಳಲಿದೆ.

ತಾಜುಲ್ ಉಲಮಾ ಮಖ್‌ಬರ ಝಿಯಾರತಿಗೆ ಸೈಯದ್ ತ್ವಯ್ಯಿಬುಲ್ ಬುಖಾರಿಯವರು ಸಅದಿಯ್ಯ ನೂರುಲ್ ಉಲಮಾ ಮಖ್‌ಬರ ಝಿಯಾರತಿಗೆ ಸೈಯದ್‌ಇಬ್ರಾಹಿಮ್ ಹಾದಿ ತಂಙಳ್ ಚೂರಿ ಹಾಗೂ ಸೈಯದ್ ಉಮರುಲ್ ಫಾರೂಖ್ ತಂಙಳ್ ಮಖ್‌ಬರ ಝಿಯಾರತಿಗೆ ಸೈಯದ್ ಫಕ್ರುದ್ದೀನ್ ಹದ್ದಾದ್ ತಂಙಳ್, ಇಚ್ಚಿಲಂಗೋಡ್ ಮಾಲಿಕ್ ದೀನಾರ್ ಮಖ್‌ಬರ ಝಿಯಾರತಿಗೆ ಇಸ್ಮಾಯೀಲ್ ಬಾಫಖೀ ತಂಙಳ್ ಹಾಗೂ ತ್ವಾಹಿರುಲ್ ಅಹ್ದಲ್ ಮಖಾಮ್ ಝಿಯಾರತಿಗೆ ಮುಟ್ಟಮ್ ಕುಂಞಿಕೋಯ ತಂಙಳ್ ನೇತೃತ್ವ ನೀಡಲಿದ್ದಾರೆ.

ಎ.28ರಂದು ಬೆಳಗ್ಗೆ 9:30 ಕ್ಕೆ ಮುಹಿಮ್ಮಾತ್ ನಗರಿಯಲ್ಲಿ ಸ್ವಾಗತ ಸಮಿತಿಯ ಚೆಯರ್‌ಮಾನ್ ಸೈಯದ್ ಮುಹಮ್ಮದ್ ಇಬ್ರಾಹೀಮ್ ಪೂಕುಂಞಿ ತಂಙಳ್ ಅಲ್ ಹೈದ್ರೋಸಿ ಧ್ವಜಾರೋಹಣ ಗೈಯಲಿದ್ದಾರೆ. ಬಳಿಕ ಮುಹಿಮ್ಮಾತಿನ ನೂತನ ಪ್ರವೇಶ ದ್ವಾರವನ್ನು ಪಿ.ಬಿ.ಅಬ್ದುಲ್ಲ ಹಾಜಿ ಹಾಗೂ ಕಬೀರ್ ಕನ್ನಿಂಗಾರ್ ಲೋಕಾರ್ಪಣೆ ಗೈಯಲಿದ್ದಾರೆ. 10:30ಕ್ಕೆ ನಡೆಯುವ ಖತ್ಮುಲ್ ಖುರ್‌ಆನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಸಯ್ಯಿದ್ ಲಿಯಾಉಲ್ ಮುಸ್ತಫಾ ಹಾಮಿದ್ ಕೋಯಮ್ಮ ತಂಙಳ್ ಸಾರಥ್ಯ ನೀಡಲಿದ್ದಾರೆ. ಸಿ ಅಬ್ದುಲ್ಲ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸೈಯದ್ ಝೈನುಲ್ ಆಬಿದೀನ್ ತಂಙಳ್ ಎಣ್ಮೂರು ದುಆಗೈಯಲಿದ್ದಾರೆ. ಅಬ್ದುಲ್ ಜಲೀಲ್ ಸಖಾಫಿ ಚೆರುಶೋಲ ವಿಷಯ ಮಂಡಣೆ ನಡೆಸಲಿದ್ದಾರೆ.

ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸೈಯದ್ ಇಂಬಿಚ್ಚಿಕೋಯ ತಂಙಳ್ ಕೊಲಾಂಡಿ ದುಆಗೈಯುವರು. ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಖಾತೆ ಸಚಿವ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ಎಂ.ಪಿ. ಪಿ. ಕರುಣಾಕರನ್ ಪುಸ್ತಕ ಮೇಳವನ್ನು ಉದ್ಘಾಟಿಸುವರು. ಶಾಸಕರಾದ ಪಿ.ಬಿ.ಅಬ್ದುಲ್ ರಝಾಕ್ ಎಂ.ಎ.ಹಾರಿಸ್ ಮುಹಿಮ್ಮಾತ್ ಹ್ಯಾಂಡ್ ಕ್ರಾಫ್ಟ್ ಸಂಸ್ಥೆಯಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಉದ್ಘಾಟಿಸಲಿದ್ದಾರೆ.

ಅಂದು ರಾತ್ರಿ ನಡೆಯುವ ಅಹ್ಲುಬೈತ್ ಅಧ್ಯಯನ ಕಾರ್ಯಕ್ರಮವನ್ನು ಸೈಯದ್ ಅತಾವುಲ್ಲಾ ತಂಙಳ್ ಉದ್ಯಾವರ ಉದ್ಘಾಟಿಸುವರು. ಸೈಯದ್ ಮುಹಮ್ಮದ್ ಮದನಿ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸೈಯದ್ ಹಬೀಬುಲ್ ಅಹ್ದಲ್ ಪಾಝೂರ್ ಪ್ರಾರ್ಥಿಸುವರು. ಡಾ.ಉಮರುಲ್ ಫಾರೂಕ್ ನಈಮಿ ಕೊಲ್ಲಮ್ ಮುಖ್ಯಭಾಷಣವನ್ನು ಮಾಡುವರು. ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ.

ಉರೂಸ್ ಮುಬಾರಕಿನ ಅಂಗವಾಗಿ ಎ.28ರಂದು ಬೆಳಗ್ಗೆ 6 ಗಂಟೆಗೆ ರಾತೀಬ್ ಮಜ್ಲಿಸ್ ಹಾಗೂ ಅಪರಾಹ್ನ 2 ಗಂಟೆಗೆ ಮೌಲಿದ್ ಮಜ್ಲಿಸ್ ನಡೆಯಲಿದೆ. ರಾತೀಬ್ ಮಜ್ಲಿಸಿಗೆ ಸೈಯದ್ ಹುಸೈನ್ ಅಲ್ ಅಹ್ದಲ್ ಹಾಗೂ ಅಬ್ದುಲ್ ರಹ್ಮಾನ್ ಅಹ್ಸನಿ ನೇತೃತ್ವವನ್ನು ನೀಡಲಿದ್ದಾರೆ. ಮುಹಮ್ಮದ್ ರಫೀಖ್ ಸಅದಿ ದೇಲಂಪಾಡಿ ಉದ್ಬೋಧನೆಯನ್ನು ನೀಡಲಿದ್ದಾರೆ. ಮೌಲಿದ್ ಕಾರ್ಯಕ್ರಮಕ್ಕೆ ಸೈಯದ್ ಝೈನುಲ್ ಆಬಿದೀನ್ ತಂಙಳ್ ಕಣ್ಣವಮ್, ಸೈಯದ್ ಅಹ್ಮದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಮಳ್‌ಹರ್, ಮುಹಮ್ಮದ್ ಮುಸ್ಲಿಯಾರ್ ಎಡಪ್ಪಾಲಂ ನೇತೃತ್ವ ನೀಡಲಿದ್ದಾರೆ.

ಶುಕ್ರವಾರ ಸಂಜೆ 4 ಗಂಟೆಗೆ ಖತಮ್ ದುಆ ಮಜ್ಲಿಸ್ ಸೈಯದ್ ಹಬೀಬ್ ಅಲ್ ಅಹ್ದಲ್ ತಂಙಳ್‌ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬ್ ನೇತೃತ್ವ ನೀಡಲಿದ್ದಾರೆ. ರಾತ್ರಿ 7ಕ್ಕೆ ಸೈಯದ್ ಸ್ವಾಲಿಹ್ ತುರಾಬ್ ತಂಙಳ್ ಅವರ ಪ್ರಾರ್ಥನೆಯೊಂದಿಗೆ ದ್ಸಿಕ್ರ್ ಹಲ್ಖಾ ಪ್ರಾರಂಭಗೊಳ್ಳಲಿದೆ. ಎಂ. ಅಲಿಕುಂಞಿ ಮುಸ್ಲಿಯಾರ್ ಶಿರಿಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸೈಯದ್ ಇಬ್ರಾಹೀಂ ಖಲೀಲ್ ಬುಖಾರಿ ಹಾಗೂ ಸೈಯದ್ ಪಿ.ಕೆ.ಎಸ್. ತಂಙಳ್ ತಲಪ್ಪಾರ ನೇತೃತ್ವ ನೀಡಲಿದ್ದಾರೆ. ಸಿ ಮುಹಮ್ಮದ್ ಫೈಝಿ, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ ಭಾಷಣಗೈಯ್ಯುವರು.

ಎ.29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಕೇರಳಕ್ಕೆ ಇಸ್ಲಾಮ್ ಹಾದು ಬಂದ ಚರಿತ್ರೆಯಿಂದ ಇಂದಿನವರೆಗಿರುವ ಸಾಂಘಿಕ ಪ್ರಗತಿಯ ಬಗ್ಗೆ ನಾಲ್ಕು ಗೋಷ್ಠಿ ನಡೆಯಲಿದೆ. ಮೊದಲ ಗೋಷ್ಠಿ ‘ಆಗಮನ’ ಎಂಬ ವಿಷಯದಲ್ಲಿ ನಡೆಯಲಿದ್ದು ಸೈಯದ್‌ಆಟಕೋಯ ತಂಙಳ್ ನೇತೃತ್ವದಲ್ಲಿ ಎಸ್.ವೈ.ಎಸ್ ಕೇರಳ ರಾಜ್ಯ ಘಟಕದ ಕಾರ್ಯದರ್ಶಿ ಮಜೀದ್ ಕಕ್ಕಾಡ್ ಉದ್ಘಾಟಿಸುವರು.

ರಹ್ಮತುಲ್ಲ ಸಖಾಫಿ ಎಳಮರಂ ಪ್ರಭಾಷಣವನ್ನು ಗೈಯುವರು. ಅಪರಾಹ್ನ 2 ಗಂಟೆಗೆ ‘ಪ್ರತಿರೋಧ’ ಎಂಬ ಗೋಷ್ಠಿ ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎ.ಪಿ ಅಬ್ದುಲ್ಲ ಮುಸ್ಲಿಯಾರ್ ಮಾಣಿಕ್ಕೋತ್ ಉದ್ಘಾಟಿಸುವರು. ಮುಹ್ಯಿಸ್ಸುನ್ನ ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್ ವಿಷಯ ಮಂಡನೆ ಮಾಡುವರು. ಅಪರಾಹ್ನ 3 ಗಂಟೆಗೆ ‘ಮುನ್ನಡೆ’ ಎಂಬ ವಿಷಯದಲ್ಲಿ ನಡೆಯುವ ಗೋಷ್ಠಿ ಅಬ್ದುಲ್ ಹಮೀದ್ ಮೌಲವಿ ಆಲಂಪಾಡಿಯ ಅಧ್ಯಕ್ಷತೆಯಲ್ಲಿ ಜರಗಲಿದೆ. ಡಾ.ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಮ್ ಉದ್ಘಾಟಿಸುವರು. ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಹಾಗೂ ವಂಡೂರ್ ಅಬ್ದುರ್ರಹ್ಮಾನ್ ಫೈಝಿ ವಿಷಯ ಮಂಡನೆ ನಡೆಸಲಿದ್ದಾರೆ. ರಾತ್ರಿ 7 ಗಂಟೆಗೆ ‘ಆದರ್ಶ’ ಎಂಬ ಗೋಷ್ಠಿಯು ಸೈಯದ್ ಅಬ್ದುಲ್ ಅಝಿಝ್ ಅಲ್ ಹೈದ್ರೋಸಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇಸ್ಮಾಯೀಲ್ ಬಾಫಖಿ ಕೊಂಡಂಗೇರಿ ಉದ್ಘಾಟಿಸುವರು. ಅಲವಿ ಸಖಾಫಿ ಕೊಳತ್ತೂರ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಎ.30ರಂದು ಬೆಳಗ್ಗೆ 9 ಗಂಟೆಗೆ ಹಿಮಮಿ ಪೂರ್ವ ವಿಧ್ಯಾರ್ಥಿ ಸಂಗಮವನ್ನು ಬೆಳ್ಳಿಪ್ಪಾಡಿ ಅಬ್ದುಲ್ಲ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸೈಯದ್ ಮುನೀರುಲ್ ಅಹ್ದಲ್ ತಂಙಳ್ ಅಹ್ಸನಿ ಅಲ್ ಕಾಮಿಲ್ ಉದ್ಘಾಟಿಸುವರು. ಅಬ್ದುರ್ರಶೀದ್ ನರಿಕ್ಕೋಡ್, ಶಾಹುಲ್ ಹಮೀದ್ ತೀರ್ಥಹಳ್ಳಿ ಬಾಷಣವನ್ನು ಮಾಡಲಿದ್ದಾರೆ. ಬಳಿಕ ಉಲಮಾ ಸಮ್ಮೇಳನ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ಉದ್ಘಾಟಿಸುವರು. ಎ.ಪಿ. ಮುಹಮ್ಮದ್ ಮುಸ್ಲಿಯಾರ್, ತೃಕರಿಪುರ್ ಮುಹಮ್ಮದಲಿ ಸಖಾಫಿ ವಿಷಯ ಮಂಡನೆಯನ್ನು ನಡೆಸಲಿದ್ದಾರೆ. ಅಪರಾಹ್ನ 3 ಗಂಟೆಗೆ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಸನದನ್ನು ಪಡೆಯುವ ಹಿಮಮಿ ವಿದ್ವಾಂಸರಿಗೆ ಸ್ಥಾನ ವಸ್ತ್ರವನ್ನು ವಿತರಿಸಲಿದ್ದಾರೆ. ಸೈಯದ್ 5 ಗಂಟೆಗೆ ಸಯ್ಯಿದ್ ಅಲೀ ಬಾಫಕೀ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಸಮಾರೋಪ ಸಂಗಮ ಆರಂಭಗೊಳ್ಳಲಿದೆ.

ಸೈಯದ್ ಕೆ.ಎಸ್ ಆಟಕ್ಕೊಯ ತಂಙಳ್ ಕುಂಬೋಲ್ ಅಧ್ಯಕ್ಷತೆಯಲ್ಲಿ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸುವರು. ಎ.ಪಿ.ಅಬೂಬಕರ್ ಮುಸ್ಲಿಯಾರ್ ಸನದುದಾನ ಭಾಷಣ ಮಾಡಲಿದ್ದಾರೆ. ಚಿತ್ತಾರಿ ಹಂಝ ಮುಸ್ಲಿಯಾರ್, ಎಂ.ಅಲಿಕುಂಞಿ ಮುಸ್ಲಿಯಾರ್, ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಅಬ್ದುರ್ರಶೀದ್ ಝೈನಿ, ಟುನೀಶ್ಯನ್ ಅಂಬಾಸಿಡರ್ ನಜ್ಮುದ್ದೀನ್ ಅಲ್‌ಖಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ಸಿ.ಅಬ್ದುಲ್ಲ ಮುಸ್ಲಿಯಾರ್ ಉಪ್ಪಳ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲ ಕುಂಞಿ ಫೈಝಿ, ಪ್ರಧಾನ ಸಂಚಾಲಕ ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಕೇರಳ ಮುಸ್ಲಿಮ್ ಜಮಾಅತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮೌಲವಿ, ಎಸ್.ಎಂ.ಎ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಕರಿವೆಳ್ಳೂರ್ ಮತ್ತಿತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X