Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮುಂಬೈ ಆಸ್ಪತ್ರೆಗೆ ‘ಭಾರವಾದ’ ಈಜಿಪ್ಟ್...

ಮುಂಬೈ ಆಸ್ಪತ್ರೆಗೆ ‘ಭಾರವಾದ’ ಈಜಿಪ್ಟ್ ಮಹಿಳೆ

ತೂಕದ ಮಹಿಳೆಯ ಸಂಬಂಧಿಕರಿಂದ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ

ವಾರ್ತಾಭಾರತಿವಾರ್ತಾಭಾರತಿ25 April 2017 12:47 PM IST
share
ಮುಂಬೈ ಆಸ್ಪತ್ರೆಗೆ ‘ಭಾರವಾದ’ ಈಜಿಪ್ಟ್ ಮಹಿಳೆ

ಮುಂಬೈ,ಎ.25 : ವಿಶ್ವದ ಅತ್ಯಂತ ಭಾರವಾದ ಮಹಿಳೆ ಈಜಿಪ್ಟ್ ದೇಶದ ಇಮಾನ್ ಅಹ್ಮದ್ (36) ಎಂಬವಳಿಗೆ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಆಕೆ ಶಸ್ತ್ರಕ್ರಿಯೆಯ ಬಳಿಕ ಬಹಳಷ್ಟು ತೂಕ ಕಳೆದುಕೊಂಡಿದ್ದರೆ, ಇದೀಗ ಆಕೆಯ ಸಹೋದರಿ ಶೈಮಾ ಸಲೀಂ ಆಸ್ಪತ್ರ್ರೆಯ ಸರ್ಜನ್ ಮುಫ್ಫಝಲ್ ಲಕ್ಡವಾಲ ಹಾಗೂ ಆಸ್ಪತ್ರೆಯನ್ನು ‘ಸುಳ್ಳುಗಾರರು’ ಎಂದು ಜರಿದಿದ್ದು ಅವರು ಇಮಾನ್ ಳ ಮೆದುಳಿನ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲು ಆಕೆಗೆ ಭಾರೀ ಔಷಧಿಗಳನ್ನು ನೀಡಿದ್ದಾರೆಂದು ಆರೋಪಿಸಿದ್ದಾರೆ.

ಈಜಿಪ್ಟ್ ನಲ್ಲಿ ಯಾವುದೇ ಆಸ್ಪತ್ರೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದಿಲ್ಲವಾದುದರಿಂದ ಇಮಾನ್ ಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವುದನ್ನು ವಿಳಂಬಗೊಳಿಸಲು ಕುಟುಂಬ ಹೂಡಿದ ತಂತ್ರ ಇದಾಗಿದೆ ಎಂದು ಆಸ್ಪತ್ರೆ ಹೇಳುತ್ತಿದೆ.

ಮುಂಬೈಯ ಸೈಫೀ ಆಸ್ಪತ್ರೆಯ ಪ್ರಕಾರ ಆಸ್ಪತ್ರೆಯು ಇಮಾನ್ ಳ ಪ್ರಯಾಣ, ಚಿಕಿತ್ಸೆ ಹಾಗೂ ಶಸ್ತ್ರಕ್ರಿಯೆಗೆ ರೂ 2 ಕೋಟಿಗಿಂತಲೂ ಅಧಿಕ ವೆಚ್ಚ ಮಾಡಿದ್ದು ಈ ಕಾರ್ಯಕ್ಕೆ ವಿಶ್ವದ ವಿವಿಧೆಡೆಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ.

ಇಮಾನ್ ಆಸ್ಪತ್ರೆಯ ತನ್ನ ಕೋಣೆಯಲ್ಲಿ ಟಿವಿ ವೀಕ್ಷಿಸುತ್ತಿರುವ ಫೋಟೋವೊಂದನ್ನು ಆಸ್ಪತ್ರೆಯ ವೈದ್ಯರು ಸೋಮವಾರ ಶೇರ್ ಮಾಡಿದ್ದರೆ ಇದೀಗ ಶೈಮಾಳ ಹೇಳಿಕೆ ಎಲ್ಲರಿಗೆ ಆಘಾತ ನೀಡಿದೆ.

ಇಮಾನ್ 240ರಿಂದ 260 ಕೆಜಿ ತನಕ ತೂಕ ಕಳೆದುಕೊಂಡಿದ್ದಾಳೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದರೆ ಶೈಮಾ ಇದನ್ನೂ ನಿರಾಕರಿಸಿದ್ದಾರೆ.

‘‘ಆಕೆ ಬಹಳಷ್ಟು ಅಸೌಖ್ಯದಿಂದಿದ್ದಾಳೆ. 10 ದಿನಗಳ ಹಿಂದೆ ಆಕೆಗೆ ತ್ರೊಂಬೋಸಿಸ್ ಆಗಿತ್ತು. ಹೀಗಾಗುತ್ತಿರುವುದು ಇದು ಎರಡನೇ ಬಾರಿ’’ ಎಂದು ವೀಡಿಯೋವೊಂದರಲ್ಲಿ ಶೈಮಾ ಹೇಳುತ್ತಿರುವುದು ದಾಖಲಾಗಿದೆ. ಇಮಾನ್ ಗೆ ಟ್ಯೂಬ್ ಮುಖಾಂತರ ಆಹಾರ ನೀಡಲಾಗುತ್ತಿರುವುದರಿಂದ ಆಕೆಗೆ ಮಾತನಾಡಲು ಅಥವಾ ಉಸಿರಾಟ ನಡೆಸಲು ಕಷ್ಟವಾಗುತ್ತಿದೆಯೆಂದೂ ಆಕೆ ಆರೋಪಿಸಿದ್ದಾರೆ. ‘‘ಆಸ್ಪತ್ರೆಯಲ್ಲಿ ಶೈಮಾಳಂಥವರಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಯಿಲ್ಲ. ಇಲ್ಲಿನ ಮಂದಿ ಕೇವಲ ಪ್ರಚಾರ ಪ್ರಿಯರಾಗಿದ್ದಾರೆ,’’ ಎಂದೂ ಶೈಮಾ ದೂರಿದ್ದಾರೆ.

ಆಸ್ಪತ್ರೆಯ ಸರ್ಜನ್ ಡಾ ಮುಫ್ಫಝಲ್ ಲಕ್ಡವಾಲ ಮಾತ್ರ ಶೈಮಾಳ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಾರೆ. ‘‘ನಾವು ಆಕೆಗಾಗಿ ಭಾರೀ ಶ್ರಮ ಪಟ್ಟಿರುವಾಗ ಈಗ ಆಕೆಯ ಕುಟುಂಬದ ಆರೋಪಗಳು ನಮ್ಮ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಿದೆ’’ ಎಂದು ಅವರು ಖೇದ ವ್ಯಕ್ತಪಡಿಸುತ್ತಾರೆ.

ಆದರೆ ಇಂತಹ ಆರೋಪಗಳಿಂದ ನಾವು ನಮ್ಮಲ್ಲಿರುವ ರೋಗಿಗೆ ಚಿಕಿತ್ಸೆ ನೀಡುವುದನ್ನು ತಡೆಯುವುದಿಲ್ಲ, ನಾವು ಚಿಕಿತ್ಸೆ ಮುಂದುವರಿಸುತ್ತೇವೆ,’’ ಎಂದು ಆಸ್ಪತ್ರೆಯ ಸಿಇಒ ಹುಝೈಬಾ ಶೆಹಾಬಿ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X