ಡೋಪಿಂಗ್ ಟೆಸ್ಟ್: ಭಾರತದ ಗೋಲ್‌ಕೀಪರ್ ಸುಬ್ರತಾ ಪಾಲ್ ವಿಫಲ

ಹೊಸದಿಲ್ಲಿ, ಎ,.25: ಭಾರತದ ಉದಯೋನ್ಮುಖ ಗೋಲ್‌ಕೀಪರ್ ಸುಬ್ರತಾಪಾಲ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಮಂಗಳವಾರ ತಿಳಿಸಿದೆ.
‘‘ಸುಬ್ರತಾ ಪಾಲ್‌ರ ‘ಎ’ ಮಾದರಿಯ ಪರೀಕ್ಷೆ ಪಾಸಿಟಿವ್ ಆಗಿದೆ. ಅವರು ನಿಷೇಧಿತ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಫೇಲಾಗಿದ್ದಾರೆ’’ ಎಂದು ಎಐಎಫ್‌ಎಫ್ ಕಾರ್ಯದರ್ಶಿ ಕುಶಾಲ್ ದಾಸ್ ತಿಳಿಸಿದ್ದಾರೆ.
ನಾಡಾ ಅಧಿಕಾರಿಗಳು ಮಾರ್ಚ್‌ನಲ್ಲಿ ಭಾರತದ ಮಾಜಿ ನಾಯಕ ಪಾಲ್‌ರನ್ನು ಪರೀಕ್ಷಿಸಿದ್ದರು ಎಂದು ರಾಷ್ಟ್ರೀಯ ಉದ್ದೀಪನಾ ತಡೆ ಘಟಕದ ಮುಖ್ಯಸ್ಥ ನವೀನ್ ಅಗರವಾಲ್ ದೃಢಪಡಿಸಿದ್ದಾರೆ.
‘‘ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ಒಳಗಾಗಬೇಕೇ ಎಂಬ ಕುರಿತು ಪಾಲ್ ಹಾಗೂ ನಾಡಾ ಅಧಿಕಾರಿಗಳು ನಿರ್ಧರಿಸಬೇಕಾಗಿದೆ. ಪಾಲ್‌ಗೆ ಅಗತ್ಯವಿದ್ದರೆ ಮಾರ್ಗದರ್ಶನ ನೀಡಲು ನಾವು ಸದಾ ಸಿದ್ಧ’’ ಎಂದು ದಾಸ್ ಹೇಳಿದ್ದಾರೆ.
Next Story





