ಉತ್ತರ ಪ್ರದೇಶದಲ್ಲಿ 15 ಸಾರ್ವತ್ರಿಕ ರಜೆಗಳಿಗೆ ಸಿಎಂ ಕತ್ತರಿ

ಲಕ್ನೋ, ಎ.26: ಉತ್ತರ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ಬಗ್ಗೆ ಇರುವ ಭಯ ನಿಜವಾಗಿದೆ.ಶ್ರೇಷ್ಠ ವ್ಯಕ್ತಿಗಳ ಜನ್ಮದಿನ ಹಾಗೂ ಸ್ಮರಣೆಗಾಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ 15 ಸಾರ್ವತ್ರಿಕ ರಜಾದಿನವನ್ನು ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರಕಾರ ರದ್ದು ಪಡಿಸಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ
ಈ ನಿರ್ಧಾರ ಕೈಗೊಳ್ಳಲಾಗಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 42 ಸಾರ್ವತ್ರಿಕ ರಜೆಗಳಿದ್ದು, ಅದರಲ್ಲಿ ಸುಮಾರು 17 ರಜೆಗಳು ಶ್ರೇಷ್ಠ ವ್ಯಕ್ತಿಗಳ ಜನ್ಮದಿನಾಚರಣೆಗಳ ಅಂಗವಾಗಿ ಇರುತ್ತದೆ.
ಬಹುತೇಕ ರಜೆಗಳನ್ನು ಬಿಎಸ್ ಪಿ ಮತ್ತು ಸಮಾಜವಾದಿ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ಘೋಷಿಸಲಾಗಿತ್ತು.
ಮಹಾರಾಣಾ ಪ್ರತಾಪ್ ಜಯಂತಿ, ಪರಶುರಾಮ ಜಯಂತಿ, ಜಮತ್ ಉಲ್ ವಿದಾ, ಛತ್ ಪೂಜಾ, ಈದ್ ಮಿಲಾದ್ ಉನ್ ನಬಿ, ಚಂದ್ರಶೇಖರ್ ಜಯಂತಿ, ಮಹರ್ಷಿ ಕಶ್ಯಪ ಮತ್ತು ಮಹಾರಾಜ್ ಗುಹಾ ಜಯಂತಿ, ವಿಶ್ವ ಕರ್ಮ ಪೂಜಾ, ಅಗ್ರಸೇನ್ ಜಯಂತಿ ಸೇರಿದಂತೆ ಒಟ್ಟು 15 ರಜೆ ದಿನಗಳನ್ನು ಉತ್ತರ ಪ್ರದೇಶ ಇದೀಗ ರದ್ದು ಪಡಿಸಿ ಆದೇಶ ನೀಡಿದೆ.





