ರೆಡ್ ಬಿಲ್ಡಿಂಗ್ ಲೇನ್ ರಸ್ತೆ ಅಗಲೀಕರಣ: ಸರ್ವೆಗೆ ತಡೆಯೊಡ್ಡಿದ ಸ್ಥಳಿಯರು

ಮಂಗಳೂರು, ಎ. 26: ಕಂಕನಾಡಿ ವಲೆನ್ಸಿಯಾ ವಾರ್ಡಿನ ರಾಷ್ಟ್ರೀಯ ಹೆದ್ದಾರಿಯಿಂದ ರೆಡ್ ಬಿಲ್ಡಿಂಗ್ ಲೇನ್ ಬಳಿ ರಸ್ತೆಯ ಅಗಲೀಕರಣಕ್ಕೆ ಸಂಬಧಿಸಿ ಬುಧವಾರ ಸರ್ವೆ ನಡೆಸಲು ಬಂದಿದ್ದ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸ್ಥಳಿಯ ನಾಗರಿಕರು ತಡೆಯೊಡ್ಡಿದ ಘಟನೆ ನಡೆದಿದೆ.
ಸ್ಥಳಿಯ ನಾಗರಿಕರು ತೀವ್ರ ವಿರೋಧದ ನಡುವೆಯು ರಸ್ತೆ ಅಗಲೀಕರಣಕ್ಕೆ ಸಂಬಧಿಸಿ ಸರ್ವೆ ನಡೆಸಲು ಬಂದಿದ್ದ ಮ.ನ.ಪಾ ಅಧಿಕಾರಿಗಳೊಂದಿಗೆ ಸ್ಥಳಿಯರು ವಾಗ್ವಾದಕ್ಕಿಳಿದು ಸರ್ವೆ ನಡೆಸಲು ಅವಕಾಶ ನೀಡದೆ ಮ.ನ.ಪಾ ಆಯುಕ್ತರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
Next Story





