ಎಟಿಎಂ ಒಡೆದು 3.69 ಲಕ್ಷ ರೂ.ದರೋಡೆ!

ಆಲಪ್ಪುಝ, ಎ. 26, ಇಲ್ಲಿ ಮೂರು ಕಡೆಗಳಲ್ಲಿ ಎಟಿಎಂ ದರೋಡೆಗೆ ಪ್ರಯತ್ನ ನಡೆದಿದ್ದು, ಕಳ್ಳರು ಒಂದು ಕಡೆ ಮಾತ್ರ ದರೋಡೆಮಾಡಲು ಯಶಸ್ವಿಯಾಗಿದ್ದಾರೆ. ಚೆಪ್ಪಾಡ್ ರಾಮಪುರಂ ಹೈಸ್ಕೂಲ್ ಜಂಕ್ಷನ್‌ನಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಎಟಿಎಂ ದೋಚುವಲ್ಲಿ ಕಳ್ಳರು ವಿಫಲರಾಗಿದ್ದಾರೆ. ಆದರೆ, ಚೆಂಙನ್ನೂರಿನಲ್ಲಿ ಎಸ್‌ಬಿಐ ಎಟಿಎಂ ಒಡೆದುಹಾಕಿ 3.69 ಲಕ್ಷರೂಪಾಯಿಯನ್ನು ಕಳ್ಳರು ದೋಚಿದ್ದಾರೆ.
ಕಳ್ಳರು ಎಸ್‌ಬಿಐ ಎಟಿಎಂಗಳನ್ನೇ ತಮ್ಮ ಕೃತ್ಯಕ್ಕೆ ಆಯ್ಕೆಮಾಡಿದ್ದಾರೆ. ಮೂರು ಕಡೆಯೂ ಗ್ಯಾಸ್ ಕಟ್ಟರ್ ಬಳಸಿ ಕೃತ್ಯಕ್ಕೆ ಯತ್ನಿಸಲಾಗಿದೆ.. ಚೆಂಙನ್ನೂರಿನಲ್ಲಿ ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಮೆಶಿನ್‌ನ ಮುಂಭಾಗವನ್ನು ಪ್ರತ್ಯೇಕಿಸಿ ಹಣವನ್ನು ಕಳ್ಳರು ಯಶಸ್ವಿಯಾಗಿ ದೋಚಿದ್ದಾರೆ. ಸೋಮವಾರ ರಾತ್ರಿ ಘಟನೆ ನಡೆದಿದೆ.
ಒಂದೇ ತಂಡ ಈ ಕೃತ್ಯಕ್ಕೆ ಯತ್ನಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಹಲವುದಿವಸಗಳಿಂದ ಚೆಂಙನ್ನೂರ್ ಎಟಿಎಂಗೆ ಹಣ ತುಂಬಿಸಿರಲಿಲ್ಲ.ಆದರೆ ಕಳೆದ ಶನಿವಾರ ಹತ್ತುಲಕ್ಷರೂಪಾಯಿಯನ್ನು ತುಂಬಲಾಗಿತ್ತು. ಮಂಗಳವಾರ ಬೆಳಗ್ಗೆ ಎಟಿಎಂ ಇದ್ದ ಕಟ್ಟಡದ ಮಾಲಕರಿಗೆ ದರೋಡೆ ಆಗಿರುವುದು ಗಮನಕ್ಕೆ ಬಂದಿದ್ದು ಅವರುಪೊಲೀಸರು ಮತ್ತು ಎಸ್‌ಬಿಐ ಮ್ಯಾನೇಜರ್‌ಗೆ ಸುದ್ದಿ ಮುಟ್ಟಿಸಿದ್ದರು. ಪ್ರಾಥಮಿಕ ಪರಿಶೀಲನೆಯಲ್ಲಿ ಶೇ. 3.69 ಲಕ್ಷರೂಪಾಯಿ ದರೋಡೆಯಾಗಿದ್ದು ಗೊತ್ತಾಗಿದೆ.





