ಮಂಗಳೂರು: ಎ.29ರಂದು ‘ಬಾ ಬಾಪು 150 ದೇಸಿ ಯಾತ್ರೆ’ಗೆ ಸ್ವಾಗತ
ಮಂಗಳೂರು, ಎ.26: ನಗರದ ಮಹಾತ್ಮ ಗಾಂಧಿ ಪ್ರತಿಷ್ಠಾನ ಹಾಗೂ ಸ್ವರೂಪ ಅಧ್ಯಯನ ಕೇಂದ್ರದ ವತಿಯಿಂದ ಕೇರಳದ ನೇಚರ್ ಲೈಫ್ ಆಸ್ಪತ್ರೆಯ ಸಂಸ್ಥಾಪಕ ಡಾ.ಜೇಕಬ್ ವಡಂಕಚೇರಿ ಮತ್ತು ಬಳಗದ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೆರದವರೆಗೆ ಹಮ್ಮಿಕೊಂಡಿರುವ ‘ಬಾ ಬಾಪು 150 ದೇಸಿ ಯಾತ್ರೆ’ಯನ್ನು ಮಂಗಳೂರು ಟಾಗೋರ್ ಗಾಂಧಿ ಪ್ರತಿಷ್ಠಾನದ ಆವರಣದಲ್ಲಿ ಎ.29ರಂದು ಬೆಳಗ್ಗೆ 10 ಗಂಟೆಗೆ ಸ್ವಾಗತಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ವರಾಜ್ಯ ಮತ್ತು ಸ್ವಾವಲಂಬನೆಯ ಆದರ್ಶಗಳೊಂದಿಗೆ ಪ್ರಕೃತಿ ಚಿಕಿತ್ಸೆಯ ಆಸ್ಪತ್ರೆಯನ್ನು ಆರಂಭಿಸಿರುವ ಡಾ.ಜೇಕಬ್ ವಡಂಕಚೇರಿ ಈ ನಿಟ್ಟಿನಲ್ಲಿ ಜನ ಜಾಗೃತಿಯನ್ನು ಹಮ್ಮಿಕೊಂಡಿದ್ದಾರೆ. ನಗರದ ಸ್ವರೂಪ ಅಧ್ಯಯನ ಕೇಂದ್ರ ಸದಸ್ಯರು ಈ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





