ದಿಲ್ಲಿ ಸೋಲು: ರಾಜೀನಾಮೆಗೆ ಸಿದ್ಧ - ಆಪ್ ಶಾಸಕಿ ಅಲ್ಕಾ ಲಂಬಾ

ಹೊಸದಿಲ್ಲಿ, ಎ. 26: ದಿಲ್ಲಿ ನಗರಸಭೆಯ ಚುನಾವಣೆಯಲ್ಲಿ ಆಮ್ ಆದ್ಮಿಪಕ್ಷಕ್ಕೆ ಸಂಭವಿಸಿದ ಹೀನಾಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಲು ಸಿದ್ಧ ಎಂದು ಆಪ್ ಶಾಸಕಿ ಅಲ್ಕಾ ಲಂಬಾ ಹೇಳಿದ್ದಾರೆ.
ತನ್ನ ಕ್ಷೇತ್ರದ ಮೂರು ವಾರ್ಡ್‌ಗಳಲ್ಲಿ ಪಕ್ಷಕ್ಕೆ ದಯನೀಯ ಸೋಲು ಸಂಭವಿಸಿದೆ. ಆದ್ದರಿಂದ ಪಕ್ಷದ ಎಲ್ಲ ಅಧಿಕಾರ ಮತ್ತು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧಳಿದ್ದೇನೆ ಎಂದು ಅಲ್ಕಾ ಲಂಬಾ ತಿಳಿಸಿದ್ದಾರೆ.
ಚಾಂದ್ನಿ ಚೌಕ್ ಕ್ಷೇತ್ರವನ್ನು ಅವರು ಶಾಸಕಿಯಾಗಿ ಪ್ರತಿನಿಧಿಸುತ್ತಿದ್ದಾರೆ. ರಾಜೀನಾಮೆ ನೀಡಿದರೂ ಅರವಿಂದ್ ಕೇಜ್ರಿವಾಲ್ ಮತ್ತು ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿಯ ಹೋರಾಟವನ್ನು ಬೆಂಬಲಿಸುತ್ತೇನೆ. ಇಂದಿನ ಪರಿಸ್ಥಿತಿಯಲ್ಲಿ ಅನ್ಯಾಯಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಡುವುದು ಸುಲಭ ಅಲ್ಲ. ಆದರೂ ಒಂದು ಬದಲಾವಣೆ ಆಗುವವರೆಗೂ ಈ ಹೋರಾಟ ಮುಂದುವರಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.2013ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಅಲ್ಕಾ ಲಂಬಾ ಆಮ್ ಆದ್ಮಿ ಪಕ್ಷಕ್ಕೆಸೇರ್ಪಡೆಗೊಂಡಿದ್ದರು.
Next Story