ಸಭೆ ನಡೆಸದಂತೆ ಅತೃಪ್ತ ನಾಯಕರಿಗೆ ಅಮಿತ್ ಶಾ ಸೂಚನೆ

ಬೆಂಗಳೂರು, ಎ.26: ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದು ಸಭೆ ನಡೆಸಲು ತಯಾರಿ ನಡೆಸಿರುವ ಅತೃಪ್ತ ಬಿಜೆಪಿ ನಾಯಕರಿಗೆ ಸಭೆ ನಡೆಸದಂತೆ ತಾಕೀತು ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಭೆ ನಡೆದರೆ ವರದಿ ನೀಡುವಂತೆ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಅವರಿಗೆ ಸೂಚಿಸಿದ್ದಾರೆ.
ರಾಜ್ಯ ಬಿಜೆಪಿಯ ಬೆಳವಣಿಯನ್ನು ಹತ್ತಿರದಿಂದ ಗಮನಿಸುತ್ತಿರುವ ಅಮಿತ್ ಶಾ ಅವರು ಬೆಂಗಳೂರಿನ ಅರಮನೆ ಆವರಣದಲ್ಲಿ ಗುರುವಾರ ನಿಗದಿಯಾಗಿರುವ ಅತೃಪ್ತ ಸಭೆಯನ್ನು ರದ್ಧುಪಡಿಸುವಂತೆ ಸಂದೇಶ ರವಾನಿಸಿದ್ದಾರೆ.
Next Story





