Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಉರ್ದು ಸಾಹಿತ್ಯ-ಪ್ರಳಯದ ನಡುವಿನ ವಸಂತ

ಉರ್ದು ಸಾಹಿತ್ಯ-ಪ್ರಳಯದ ನಡುವಿನ ವಸಂತ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ26 April 2017 10:13 PM IST
share
ಉರ್ದು ಸಾಹಿತ್ಯ-ಪ್ರಳಯದ ನಡುವಿನ ವಸಂತ

ಸುಮಾರು ಎರಡೂವರೆ ದಶಕಗಳ ಹಿಂದೆ ಡಾ. ಡಿ. ಆರ್. ನಾಗರಾಜ್ ಮತ್ತು ಅಝೀಝುಲ್ಲಾ ಬೇಗ್ ನಡೆಸಿದ ಉರ್ದು-ಕನ್ನಡ ಬರಹಗಾರರ ಕಮ್ಮಟವೊಂದರಿಂದ ಹೊರಬಂದ ಅನುವಾದಗಳ ಸಂಗ್ರಹವೇ ‘ಉರ್ದು ಸಾಹಿತ್ಯ’. ಉರ್ದು ಕಾವ್ಯ ಮತ್ತು ಕಥನ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವುದು ಆ ಕಮ್ಮಟದ ಗುರಿಯಾಗಿತ್ತು. ಉರ್ದು ಭಾಷೆಯ ಪ್ರಾತಿನಿಧಿಕ ಬರಹಗಳನ್ನು ನಿರ್ದೇಶಕರು ಆಯ್ಕೆ ಮಾಡಿದ್ದರು. ಬಳಿಕ ಅದು ಸಂಕಲನ ರೂಪ ಪಡೆದು ಮುದ್ರಣಗೊಂಡಿತ್ತು. ಆ ಸಂಕಲನವನ್ನು ಇದೀಗ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ‘ಉರ್ದು ಸಾಹಿತ್ಯ’ ಹೆಸರಿನಲ್ಲಿ ಪುನರ್ ಮುದ್ರಿಸಿದೆ.

ಮೊದಲ ಅಧ್ಯಾಯದಲ್ಲಿ ಕಾವ್ಯ ಪ್ರಕಾರದ ಅನುವಾದಗಳಿವೆ. ಮೀರ್ ತಖಿಮೀರ್, ಮೀರ್ ಅನೀಸ್, ಸೌದಾ, ಖ್ವಾಜಾಮೀರ್ ದರ್ದ್, ಗಾಲಿಬ್, ಮೂಮಿನ್, ಅಕ್ಬರ್ ಇಲಹಾಬಾದಿ, ಅಸ್ಗರ್ ಗೋಂಡವಿ, ನಫೀಸ್ ಬೆಂಗಳೂರಿ, ಹಝ್ರತ್ ಮುಹಾನಿ, ಡಾ. ಇಕ್ಬಾಲ್, ಫೈಝ್‌ಅಹಮದ್ ಫೈಝ್, ಸಾಹಿರ್ ಲುಧಿಯಾನ್ವಿ, ಜಾನಿಸಾರ್ ಅಖ್ತರ್, ಜಫರ್ ಇಕ್ಬಾಲ್ ಹೀಗೆ ಉರ್ದು ಸಾಹಿತ್ಯದಲ್ಲಿ ಕೈಯಾಡಿಸಿದ ಹಿರಿಯ, ಕಿರಿಯ ಕವಿಗಳ ಕಾವ್ಯಗಳನ್ನು ಕನ್ನಡಕ್ಕಿಳಿಸಲಾಗಿದೆ. ನಟರಾಜ್ ಹುಳಿಯಾರ್, ಸಿದ್ದಲಿಂಗ ಪಟ್ಟಣಶೆಟ್ಟಿ, ಸುಮತೀಂದ್ರ ನಾಡಿಗ, ಹೇಮಾ ಪಟ್ಟಣಶೆಟ್ಟಿ, ಕಮಲಾ ಹೆಮ್ಮಿಗೆ, ಎಚ್. ಎಸ್. ಶಿವಪ್ರಕಾಶ್, ಕೇಶವ ಮಳಗಿ, ಶಶಿಕಲಾ ವೀರಯ್ಯ ಸ್ವಾಮಿ, ಎಂ. ಆರ್. ಕಮಲ ಮೊದಲಾದ ಕನ್ನಡ ಪ್ರಮುಖ ಕವಿಗಳು, ಲೇಖಕರು ಈ ಅನುವಾದದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

ಇದೇ ಸಂದರ್ಭದಲ್ಲಿ ಕಥಾ ವಿಭಾಗದಲ್ಲಿ ಪ್ರೇಮ್‌ಚಂದ್, ಸಾದತ್ ಹಸನ್ ಮಾಂಟೋ, ಇಸ್ಮತ್ ಚುಗ್ತಾಯಿ, ಕಿಷನ್ ಚಂದರ್, ಖುರಾತುಲ್ಲೇನ್ ಹೈದರ್, ಬಲವಂತ್ ಸಿಂಹ, ಅಝೀಝ್ ಅಹಮದ್, ಸಲಾಂ ಬಿನ್ ರಝಾಕ್ ಮೊದಲಾದ ಮಹತ್ವದ ಕತೆಗಾರರನ್ನು ಕನ್ನಡಕ್ಕಿಳಿಸಲಾಗಿದೆ. ಈ ಅನುವಾದದ ಕಾರ್ಯದಲ್ಲಿ ಬೊಳುವಾರು ಮಹಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ, ಅಗ್ರಹಾರ ಕೃಷ್ಣಮೂರ್ತಿ, ಪಂಚಾಕ್ಷರಿ ಹಿರೇಮಠ, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ ಚಂದರ್, ರಹಮತ್ ತರೀಕೆರೆ, ಕೆ. ಮರುಳಸಿದ್ದಪ್ಪ ಮೊದಲಾದ ಕನ್ನಡದ ಮಹತ್ವದ ಲೇಖಕರು, ಕಥೆಗಾರರು ಭಾಗವಹಿಸಿದ್ದಾರೆ. ಮೂಲ ಲೇಖಕರು ಮತ್ತು ಅನುವಾದಿಸಿದ ಲೇಖಕರ ಹೆಸರುಗಳೇ ಈ ಕೃತಿಯ ಹಿರಿಮೆಯನ್ನು ಎತ್ತಿ ಹಿಡಿಯು ತ್ತದೆ. ಉರ್ದು ಸಾಹಿತ್ಯದ ಕಾವ್ಯ ಮತ್ತು ಕಥನದ ಸೊಗಡನ್ನು ಈ ಕೃತಿ ಎತ್ತಿ ಹಿಡಿಯುತ್ತದೆ. ಡಿ. ಆರ್. ನಾಗರಾಜ್ ಅವರು ಈ ಕೃತಿಗೆ ಅಪರೂಪದ ಮುನ್ನುಡಿಯನ್ನೂ ಬರೆದಿದ್ದಾರೆ. ಅವರೇ ಹೇಳುವಂತೆ ಉರ್ದು ಕಾವ್ಯವೆಂದರೆ ಪ್ರಳಯದ ನಡುವಿನ ವಸಂತ. 474 ಪುಟಗಳ ಈ ಕೃತಿಯ ಮುಖಬೆಲೆ 250 ರೂಪಾಯಿ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರನ್ನು ಸಂಪರ್ಕಿಸಬಹುದು.
 

share
-ಕಾರುಣ್ಯಾ
-ಕಾರುಣ್ಯಾ
Next Story
X