ಕಾರ್ಮಿಕ ಲೋಕ ಪುರಸ್ಕಾರ: ಹಾಲ್ದೊಡ್ಡೇರಿ ಸುಧೀಂದ್ರ, ರಾಮನ್‌ಥಳಿ ಸುಧಾಕರನ್, ಮಮತಾ ಪೂಜಾರಿ ಆಯ್ಕೆ
ಬೆಂಗಳೂರು, ಎ.26: ವಿಜ್ಞಾನ ಲೇಖಕ ಡಾ.ಹಾಲ್ದೊಡ್ಡೇರಿ ಸುಧೀಂದ್ರ, ಕನ್ನಡ-ಮಲಯಾಳಂ ಸಾಹಿತಿ ರಾಮನ್‌ಥಳಿ ಸುಧಾಕರನ್, ರಾಷ್ಟ್ರೀಯ ಕಬ್ಬಡಿ ತಂಡದ ನಾಯಕಿ ಮಮತಾ ಪೂಜಾರಿ, ಹಿರಿಯ ರಂಗಕರ್ಮಿ ಕೆ.ಜಿ. ಶಂಕರಪ್ಪ, ಕನ್ನಡ ಚಿಂತಕ ವಸಂತ್ ಶೆಟ್ಟಿ, ಕನ್ನಡ ಹೋರಾಟಗಾರ ಎಂ.ತಿಮ್ಮಯ್ಯ, ಕಾರ್ಮಿಕ ಮುಖಂಡ ಎನ್.ಎಂ.ಕುಂಜಪ್ಪ 2017ರ ಕಾರ್ಮಿಕ ಲೋಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಹಲವು ವರ್ಷಗಳಿಂದ ಸಾಹಿತ್ಯ, ಕಲೆ, ಕ್ರೀಡೆ, ಕಾರ್ಮಿಕ ಸಂಘಟನೆ, ಕನ್ನಡಪರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಕಾರ್ಮಿಕರಿಗೆ ‘ಕಾರ್ಮಿಕಲೋಕ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, 2017ನೆ ಸಾಲಿನ ಪ್ರಶಸ್ತಿಯನ್ನು ಮೇ 9ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ‘ಕನ್ನಡ ಚಿಂತನೆ’ ಕಾರ್ಯಕ್ರಮದಲ್ಲಿ ಕೊಡಲಾಗುವುದು ಎಂದು ಕಾರ್ಮಿಕಲೋಕ ಪತ್ರಿಕೆಯ ಗೌರವ ಸಂಪಾದಕ ರಾ.ನಂ.ಚಂದ್ರಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story