ಲ್ಯಾಪ್ ಟಾಪ್ ಕಳ್ಳತನ ಜಾಲ: ಪೊಲೀಸ್ ಪುತ್ರ ಸೇರಿ ಮೂವರ ಬಂಧನ

ಬೆಂಗಳೂರು, ಎ.26: ಲ್ಯಾಪ್‌ಟಾಪ್ ಕಳ್ಳತನ ಮಾಡಿ ಒಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುವ ಜಾಲದಲ್ಲಿ ತೊಡಗಿದ್ದ ಪೊಲೀಸ್ ಎಎಸ್ಸೈಯೊಬ್ಬರ ಪುತ್ರ ಸೇರಿ ಮೂವರನ್ನು ಎಚ್‌ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚೇತನ್, ಎಚ್‌ಎಎಲ್ ನಿವಾಸಿ ಶರವಣ, ಮುಖ್ತಿಯಾರ್ ಎಂದು ಪೊಲೀಸರು ಗುರುತಿಸಿದ್ದಾರೆ.
ನಗರದ ಅತಿಥಿ ಗೃಹಗಳಲ್ಲಿ (ಪಿಜಿ) ಲ್ಯಾಪ್ ಟಾಪ್ ಕಳ್ಳತನ ಮಾಡಿ ಒಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಕಳ್ಳತನ ಮಾಡುತ್ತಿರುವ ಬಗ್ಗೆ ನಾಗೇಶ್ ಎಂಬವರು ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಚೇತನ್ ಎಂಬವನು ಎಎಸ್ಸೈಯೊಬ್ಬರ ಪುತ್ರ ಎಂದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಬಂಧಿತರಿಂದ 50 ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





