ಐಪಿಎಲ್: ಕೆಕೆಆರ್ ತಂಡಕ್ಕೆ ಜಯ
ರಾಬಿನ್ ಉತ್ತಪ್ಪ -ಗಂಭೀರ್ ಆಟ

ಪುಣೆ, ಎ.26: ಕೋಲ್ಕತಾ ನೈಟ್ ರೈಡರ್ಸ್ ತಂಡ ಇಂದು ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 30ನೆ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿದೆ.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಮತ್ತು ನಾಯಕ ಗೌತಮ್ ಗಂಭೀರ್ ಎರಡನೆ ವಿಕೆಟ್‌ಗೆ ದಾಖಲಿಸಿದ 158 ರನ್‌ಗಳ ಜೊತೆಯಾಟದ ನೆರವಿನಲ್ಲಿ ಕೆಕೆಆರ್ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 184 ರನ್ ಗಳಿಸಿತು.
ಉತ್ತಪ್ಪ 87 ರನ್(47ಎ, 7ಬೌ,6ಸಿ) ಮತ್ತು ಗಂಭೀರ್ 62 ರನ್(46ಎ,6ಬೌ,1ಸಿ) ಗಳಿಸಿದರು.
ಕೆಕೆಆರ್ 2.4 ಓವರ್‌ಗಳಲ್ಲಿ 20 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆೆದುಕೊಂಡಿತ್ತು. ಸುನೀಲ್ ನರೇನ್(16) ಔಟಾದ ಬಳಿಕ ಗಂಭೀರ್‌ಗೆ ಉತ್ತಪ್ಪ ಜೊತೆಯಾಗಿ ಸ್ಪೋಟಕ ಬ್ಯಾಟಿಂಗ್ ನಡೆಸಿದರು.
ಗೆಲುವಿಗೆ 5 ರನ್‌ಗಳ ಆವಶ್ಯಕತೆ ಇದ್ದಾಗ ಉತ್ತಪ್ಪ ಔಟಾದರು. ಅವರ ಬೆನ್ನೆಲ್ಲೆ ಗಂಭೀರ್ ನಿರ್ಗಮಿಸಿದರು. ಅಂತಿಮವಾಗಿ ಡರೆನ್ ಬ್ರಾವೋ(6) ಆಗಮಿಸಿ ಗೆಲುವಿಗೆ ಅಗತ್ಯದ ರನ್ ಪೂರೈಸಿದರು.
ಪುಣೆ ಸೂಪರ್ ಜೈಂಟ್ಸ್ 182/5
ಪುಣೆ ಸೂಪರ್ ಜೈಂಟ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 182 ರನ್ ಗಳಿಸಿತ್ತು.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪುಣೆ ನಾಯಕ ಸ್ಟೀವ್ ಸ್ಮಿತ್ ದಾಖಲಿಸಿದ ಅರ್ಧಶತಕ (ಔಟಾಗದೆ 51) ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.
ಅಜಿಂಕ್ಯ ರಹಾನೆ ಮತ್ತು ರಾಹುಲ್ ತ್ರಿಪಾಠಿ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 65 ರನ್‌ಗಳ ಜೊತೆಯಾಟ ನೀಡಿದರು. ತ್ರಿಪಾಠಿ 38 ರನ್ ಗಳಿಸಿದ್ದಾಗ ಚಾವ್ಲಾ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ರಹಾನೆ 46 ರನ್(41ಎ, 4ಬೌ,1ಸಿ) ಗಳಿಸಿ ಅವರನ್ನು ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ಸ್ಟಂಪ್ ಮಾಡಿದರು.ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 23ರನ್(11ಎ, 1ಬೌ,2ಸಿ), ಕ್ರಿಸ್ಟಿಯನ್ 16 ರನ್(6ಎ, 2ಸಿ) ಗಳಿಸಿದರು.
ಕೋಲ್ಕತಾ ತಂಡದ ಕುಲದೀಪ್ ಯಾದವ್ 31ಕ್ಕೆ 2 ವಿಕೆಟ್, ಉಮೇಶ್ ಯಾದವ್, ಸುನೀಲ್ ನರೇನ್ ಮತ್ತು ಪಿಯೂಷ್ ಚಾವ್ಲಾ ತಲಾ 1 ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 182 (ಸ್ಮಿತ್ ಔಟಾಗದೆ 51, ರಹಾನೆ 46, ತ್ರಿಪಾಠಿ 38, ಧೋನಿ 23; ಕುಲದೀಪ್ ಯಾದವ್ 31ಕ್ಕೆ 2).
ಕೋಲ್ಕತಾ ನೈಟ್ ರೈಡರ್ಸ್ 18.1 ಓವರ್‌ಗಳಲ್ಲ್ಲಿ 184/3(ಉತ್ತಪ್ಪ 87, ಗಂಭೀರ್ 62; ಉನದ್ಕಟ್ 26ಕ್ಕೆ 1)
ಪಂದ್ಯಶ್ರೇಷ್ಠ: ರಾಬಿನ್ ಉತ್ತಪ್ಪ







