ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನ: ಎ.28ರಂದು ಮಾರ್ನಮಿಕಟ್ಟೆಯಲ್ಲಿ ಸಾರ್ವಜನಿಕ ಸಭೆ
ಮಂಗಳೂರು, ಎ.26: ಜಮಾಅತೆ ಇಸ್ಲಾಮಿ ಹಿಂದ್ ದೇಶಾದ್ಯಂತ ಎ.23ರಿಂದ ಮೇ 7ರವರೆಗೆ ಹಮ್ಮಿಕೊಂಡಿರುವ ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನದ ಅಂಗವಾಗಿ ಎ.28ರಂದು ನಗರದ ಮಾರ್ನಮಿಕಟ್ಟೆಯಲ್ಲಿರುವ ನಾಯಕ್ಸ್ ಗ್ರೌಂಡ್‌ನಲ್ಲಿ ರಾತ್ರಿ 7:15ಕ್ಕೆ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ.
ಜಮಾಅತೆ ಇಸ್ಲಾಮಿ ಹಿಂದ್ ಬೋಳಾರ-ಜೆಪ್ಪುವರ್ತುಲದ ವತಿಯಿಂದ ಆಯೋಜಿಸಲಾಗಿರುವ ಈ ಸಭೆಯಲ್ಲಿ ನಗರದ ಕಚ್ಚೀ ಮೆಮನ್ ಮಸೀದಿಯ ಖತೀಬ್ ಹುಸೈನ್ ಸುಹೈಬ್ ನದ್ವಿ ‘ಇಸ್ಲಾಮೀ ಶರೀಅತ್’ ವಿಷಯದಲ್ಲಿ ಉರ್ದುವಿನಲ್ಲಿ, ಕಸ್ಬಾ ಬೆಂಗ್ರೆಯ ಅನಸ್ ಬಿನ್ ಮಾಲಿಕ್ ಜುಮಾ ಮಸೀದಿಯ ಖತೀಬ್ ಸಾಜಿದ್ ಮೌಲವಿ ಪರಪ್ಪೂರ್ ‘ಕುಟುಂಬ ಜೀವನದಲ್ಲಿ ಶರೀಅತ್ ಪಾಲನೆ’ ಎಂಬ ವಿಷಯದಲ್ಲಿ ಮಲಯಾಳಂನಲ್ಲಿ ಹಾಗೂ ತೊಕ್ಕೊಟ್ಟು ಮಸ್ಜಿದುಲ್ ಹುದಾದ ಖತೀಬ್ ಮುಹಮ್ಮದ್ ಕುಂಞಿ ‘ಸಾಮುದಾಯಿಕ ಐಕ್ಯ’ ಎಂಬ ವಿಷಯದಲ್ಲಿ ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಸೈಯದ್ ಯಹ್ಯಾ ತಂಙಳ್ ಮದನಿ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





