ಸಂಘಟನೆ ಉಳಿಸಿ ಸಮಾವೇಶದಲ್ಲಿ ಬಿಎಸ್ ವೈ-ಈಶ್ವರಪ್ಪ ಕಾರ್ಯಕರ್ತರ ನಡುವೆ ಹೊಯ್ -ಕೈ
“ನೀನು ಅಯೋಗ್ಯ, ಬಿಎಸ್ ವೈ ವಿರುದ್ಧ ಮಾತನಾಡಬೇಡ” ಎಂದ ಯಡಿಯೂರಪ್ಪ ಬೆಂಬಲಿಗ

ಬೆಂಗಳೂರು, ಎ.27: ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ “ಸಂಘಟನೆ ಉಳಿಸಿ” ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಈಶ್ವರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆಯಿತು,
ಸಮಾವೇಶದಲ್ಲಿ ಎಂಎಲ್ ಸಿ ಭಾನುಪ್ರಕಾಶ್ ಭಾಷಣ ಮಾಡುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಬಿಎಸ್ ವೈ ಬೆಂಬಲಿಗನೋರ್ವ ವೇದಿಕೆಯ ಹತ್ತಿರ ಆಗಮಿಸಿದರು. ಈ ಸಂದರ್ಭ ಅವರನ್ನು ಈಶ್ವರಪ್ಪ ಬೆಂಬಲಿಗರು ತಡೆದಿದ್ದು, ಹೊಯ್ ಕೈ ನಡೆದಿದೆ.
ಯಡಿಯೂರಪ್ಪರನ್ನು ಟೀಕಿಸಿದ ಭಾನುಪ್ರಕಾಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಎಸ್ ವೈ ಬೆಂಬಲಿಗ, “ನೀನು ಅಯೋಗ್ಯ, ಬಿಎಸ್ ವೈ ವಿರುದ್ಧ ಮಾತನಾಡಬೇಡ” ಎಂದಿದ್ದಾರೆ. ಈ ಸಂದರ್ಭ ಕೋಪಗೊಂಡ ಭಾನುಪ್ರಕಾಶ್ ಬಿಎಸ್ ವೈ ಬೆಂಬಲಿಗನನ್ನು ಹೊರಗೆ ಕಳುಹಿಸಿ ಎಂದಿದ್ದಾರೆ. ಈಶ್ವರಪ್ಪ ಬೆಂಬಲಿಗರು ಕಾರ್ಯಕರ್ತನನ್ನು ಸಭೆಯಿಂದ ಹೊರಗೆ ಎಳೆದುಕೊಂಡು ಹೋಗಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ.
Next Story





