ಬಿಜೆಪಿ ಭಿನ್ನಮತರಿಂದ ಬಿಎಸ್‌ವೈಗೆ ಗಡುವು

ಬೆಂಗಳೂರು, ಎ.27: ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಬಿಕ್ಕಟ್ಟನ್ನು ಮೇ 10ರೊಳಗೆ ಬಗೆಹರಿಸಬೇಕು ಎಂದು ಕೆ.ಎಸ್ ಈಶ್ವರಪ್ಪ ನೇತೃತ್ವದ ಬಿಜೆಪಿ ಭಿನ್ನಮತರು ಗಡುವು ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಸಭೆ ಸೇರಿದ್ದ ಬಿಜೆಪಿ ಭಿನ್ನಮತ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಪಕ್ಷದ ಭಿನ್ನಮತವನ್ನು ಬಗೆಹರಿಸಲು ಗಡುವು ವಿಧಿಸಿದ್ದಾರೆ. ಒಂದು ವೇಳೆ ಬಿಕ್ಕಟ್ಟು ಬಗೆಹರಿಸದೇ ಇದ್ದಲ್ಲಿ ಮೇ 20 ರಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Next Story





