ವಿದ್ಯಾರ್ಥಿಗಳಿಗೆ ಇನ್ನು ಕಾಲೇಜು ಪರಿಸರದಲ್ಲಿ ಇದನ್ನು ನಿಷೇಧಿಸಲಾಗಿದೆ !
ಕೇಂದ್ರದ ಹೊಸ ಐಡಿಯಾ

ಹೊಸದಿಲ್ಲಿ,ಎ. 27: ಸಾರ್ವಜನಿಕಸ್ಥಳಗಳಲ್ಲಿ ಉಗುಳುವುದನ್ನು ತಡೆಯಲು ಕೇಂದ್ರ ಸರಕಾರ ಹೊಸ ಜಾಗೃತಿಯೊಂದಿಗೆ ರಂಗಪ್ರವೇಶಿಸಿದೆ. ಸರಕಾರದ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಉಗುಳುವುದು ಒಂದು ಸವಾಲಾಗಿಯೇ ಪರಿಣಿಸಿದೆ.ಆದ್ದರಿಂದ ಇದನ್ನು ತಡೆಯಲು ಹೊಸ ಸೂಚನೆಯನ್ನು ಕೇಂದ್ರಸರಕಾರ ಹೊರಡಿಸಿದೆ.
ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿಗೆ ಸರಕಾರ ಕ್ರಮಕೈಗೊಂಡಿದ್ದು, ಇದರ ಅಂಗವಾಗಿ ಅಖಿಲ ಭಾರತ ತಾಂತ್ರಿಕ ವಿದ್ಯಾಭ್ಯಾಸ ಕೌನ್ಸಿಲ್(ಒಐಸಿಟಿಇ) ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಗೆ, ಪ್ರೊಫೆಶನಲ್, ತಾಂತ್ರಿಕ ವಿದ್ಯಾಭ್ಯಾಸ ಸಂಸ್ಥೆಗಳಿಗೆ ವಿಶೇಷ ಸುತ್ತೋಲೆ ಕಳುಹಿಸಿದೆ. ವಿದ್ಯಾರ್ಥಿಗಳುಕಾಲೇಜು ಪರಿಸರದಲ್ಲಿ ಉಗುಳುವುದನ್ನು ತಡೆಯಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಇದಕ್ಕಾಗಿನ್ಯಾಶನಲ್ ಸರ್ವಿಸ್ ಸ್ಕೀಂ(ಎನ್ ಎಸ್‌ಎಸ್) , ನ್ಯಾಶನಲ್ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ) ಸದಸ್ಯರ ಸೇವೆಯನ್ನು ಬಳಸಿಕೊಳ್ಳಬೇಕು. ಅಖಿಲಭಾರತ ತಾಂತ್ರಿಕ ವಿದ್ಯಾಭ್ಯಾಸ ಕೌನ್ಸಿಲ್ ಅಂಗೀಕಾರ ಪಡೆದುಕೊಂಡ 10,000 ಕಾಲೇಜುಗಳು ದೇಶದಲ್ಲಿವೆ.ಇಲ್ಲಿ 20 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.





