ಟರ್ಕಿ : ಮುಳುಗಿದ ರಶ್ಯ ನೌಕೆ: 78 ಮಂದಿ ರಕ್ಷಣೆ

ಇಸ್ತಾಂಬುಲ್, ಎ. 27: ಟರ್ಕಿಯ ಕಪ್ಪು ಸಮುದ್ರ ಕರಾವಳಿಯಲ್ಲಿ ಗುರುವಾರ ಜಾನುವಾರುಗಳನ್ನು ಒಯ್ಯುತ್ತಿದ್ದ ಹಡಗೊಂದಕ್ಕೆ ಢಿಕಿಯಾಗಿ ರಶ್ಯದ ನೌಕಾ ಗುಪ್ತಚರ ಹಡಗೊಂದು ಮುಳುಗಿದೆ ಎಂದು ಟರ್ಕಿ ತಟ ಸುರಕ್ಷತಾ ಪ್ರಾಧಿಕಾರ ಹೇಳಿದೆ.
ನೌಕೆಯಲ್ಲಿದ್ದ ಎಲ್ಲ 78 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಪ್ರದೇಶದಲ್ಲಿ ಮಂಜು ಆವರಿಸಿದ್ದು ದೃಗ್ಗೋಚರತೆ ಕಡಿಮೆ ಇದ್ದದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
Next Story





