ಡೆಲ್ಲಿಗೆ ಡಿಕಾಕ್ ಬದಲಿಗೆ ಸ್ಯಾಮುಯೆಲ್ಸ್
ಹೊಸದಿಲ್ಲಿ, ಎ.27: ಐಪಿಎಲ್‌ನ ಇನ್ನುಳಿದ ಪಂದ್ಯಗಳಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ವಿಂಡೀಸ್ ಆಲ್‌ರೌಂಡರ್ ಮರ್ಲಾನ್ ಸ್ಯಾಮುಯೆಲ್ಸ್‌ರನ್ನು ಸೇರಿಸಿಕೊಂಡಿದೆ. ಗಾಯಗೊಂಡಿರುವ ದಕ್ಷಿಣ ಆಫ್ರಿಕದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಬದಲಿಗೆ ಸ್ಯಾಮುಯೆಲ್ಸ್ ಸೇರ್ಪಡೆಯಾಗಿದ್ದಾರೆ.
ಕಳೆದ ತಿಂಗಳು ನ್ಯೂಝಿಲೆಂಡ್ ಪ್ರವಾಸದ ವೇಳೆ ಬಲನಡು ಬೆರಳಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಡಿಕಾಕ್ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಸ್ಯಾಮುಯೆಲ್ಸ್ ಎ.29 ರಂದು ಡೆಲ್ಲಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಈವರ್ಷ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಸ್ಯಾಮುಯೆಲ್ಸ್ ಹರಾಜಾಗದೇ ಉಳಿದಿದ್ದರು. ಸ್ಯಾಮುಯೆಲ್ಸ್ 4 ವರ್ಷಗಳ ಹಿಂದೆ 2013ರಲ್ಲಿ ಪುಣೆ ವಾರಿಯರ್ಸ್ ತಂಡದಲ್ಲಿ ಕೊನೆಯ ಬಾರಿ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು.
ಈತನಕ ಪುಣೆ ತಂಡವನ್ನು ಮಾತ್ರ ಪ್ರತಿನಿಧಿಸಿರುವ ಸ್ಯಾಮುಯೆಲ್ಸ್ 2012ರ ಆವೃತ್ತಿಯಲ್ಲಿ 8 ಪಂದ್ಯಗಳ ಪೈಕಿ ಒಟ್ಟು 124 ರನ್ ಹಾಗೂ 8 ವಿಕೆಟ್‌ಗಳನ್ನು ಕಬಳಿಸಿದ್ದರು.
ಸ್ಯಾಮುಯೆಲ್ಸ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿನ ದಾಖಲೆ ಅತ್ಯುತ್ತಮವಾಗಿದ್ದು, 149 ಪಂದ್ಯಗಳಲ್ಲಿ 32.66ರ ಸರಾಸರಿಯಲ್ಲಿ 3,757 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳಿವೆ. 7ರ ಇಕಾನಮಿ ರೇಟ್‌ನಲ್ಲಿ 68 ವಿಕೆಟ್‌ಗಳನ್ನು ಕಬಳಿಸಿದ್ದರು.







