ಕೇರಳದಲ್ಲೂ ನ್ಯಾಯಬೆಲೆ ಹೊಟೇಲು !

ತೃಶೂರ್, ಎ. 28: ತಮಿಳ್ನಾಡಿನಲ್ಲಿ ಯಶಸ್ವಿಯಾದ ನ್ಯಾಯ ಬೆಲೆ ಹೊಟೇಲು ಕೇರಳದಲ್ಲಿಯೂ ತೆರೆಯಲು ಸಜ್ಜಾಗಿದೆ. ಈ ಕುರಿತು ವಿಳಂಬವಾಗದೆ ಸರಕಾರ ತೀರ್ಮಾನಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆಹಾರ- ಸಾರ್ವಜನಿಕ ವಿತರಣೆ ಸಚಿವಾಲಯದ ನಿಯಂತ್ರಣದಲ್ಲಿ ಹೊಟೇಲುಗಳು ಸ್ಥಾಪನೆಗೊಳ್ಳಲಿದೆ. ಕೇರಳದಲ್ಲಿ ಒಂದೇ ರೀತಿಯ ಆಹಾರಕ್ಕೆ ಬೇರೆ ಬೇರೆ ರೀತಿ ಬೆಲೆ ನಿಗದಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕಡಿಮೆಬೆಲೆಗೆ ಊಟ ಲಭ್ಯಗೊಳಿಸುವ ಉದ್ದೇಶದಿಂದ ಸರಕಾರ ಹೊಟೇಲನ್ನು ಆರಂಭಿಸಲು ಸಿದ್ಧವಾಗಿದೆ.
ಹೊಟೇಲು ಸಂಘಟನೆಗಳ ಪ್ರತಿಭಟನೆಯಿಂದಾಗಿ ಹೊಟೇಲು ಆಹಾರಕ್ಕೆ ಏಕ ರೀತಿಯ ಬೆಲೆನಿಶ್ಚಯಿಸಲು ಸಾಧ್ಯವಾಗಿಲ್ಲ. ಹಿಂದಿನ ಎಲ್‌ಡಿಎಫ್ ಸರಕಾರದ ಸಮಯದಲ್ಲಿ ಸಚಿವ ಸಿ.ದಿವಾಕರನ್ ಇಂತಹ ಒಂದುಪ್ರಯತ್ನಕ್ಕೆ ಮುಂದಾಗಿದ್ದರೂ ಅದು ಯಶಸ್ವಿಯಾಗಿರಲಿಲ್ಲ. ಆದರೆ ಈ ಬಾರಿ ಸಚಿವ ತಿಲೋತ್ತಮರ ನೇತೃತ್ವದಲ್ಲಿ ನ್ಯಾಯಬೆಲೆ ಹೊಟೇಲು ಯೋಜನೆ ಪ್ರಾರಂಭವಾಗಲಿದೆ. ರಾಜ್ಯ ಸರಕಾರದ ಪ್ರಥಮ ವರ್ಷದ ಘೋಷಣೆಯಲ್ಲಿ ನ್ಯಾಯ ಬೆಲೆ ಹೊಟೇಲುಗಳು ಕೂಡಾ ಇರಲಿದೆ ಎಂದು ಮೂಲಗಳು ಹೇಳಿವೆ.