ನಿರ್ದೇಶಕ ಮಧುರ ಭಂಡಾರ್ಕರ್ ಕೊಲೆ ಸಂಚು ರೂಪಿಸಿದ್ದ ಮಾಡೆಲ್‌ಗೆ ಮೂರು ವರ್ಷ ಜೈಲು

ಮುಂಬೈ,ಎ.28: ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಮಾಡೆಲ್ ಪ್ರೀತಿ ಜೈನ್‌ಗೆ ಇಲ್ಲಿಯ ನ್ಯಾಯಾಲಯವೊಂದು ಶುಕ್ರವಾರ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ತೀರ್ಪಿನ ವಿರುದ್ಧ ತಾನು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿಲಿದ್ದು, ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಪ್ರೀತಿ ಅರ್ಜಿ ಸಲ್ಲಿಸಿದ್ದಾರೆ.
ಭಂಡಾರ್ಕರ್ ತನ್ನ ಚಿತ್ರಗಳಲ್ಲಿ ನಟನೆಗೆ ಅವಕಾಶ ನೀಡುವ ನೆಪದಲ್ಲಿ 1999 ಮತ್ತು 2004ರ ನಡುವೆ ತನ್ನ ಮೇಲೆ 16 ಬಾರಿ ಅತ್ಯಾಚಾರ ನಡೆಸಿದ್ದರು ಎಂದು ಪ್ರೀತಿ 2004, ಜುಲೈನಲ್ಲಿ ವರ್ಸೋವಾ ಪೊಲೀಸರಲ್ಲಿ ದೂರು ಸಲ್ಲಿಸಿದ್ದರು.
ಭಂಡಾರ್ಕರ್ ವಿರುದ್ಧದ ಅತ್ಯಾಚಾರದ ಆರೋಪವನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿ ಹಾಕಿತ್ತು. ಅವರ ಹತ್ಯೆಗಾಗಿ ಬಾಡಿಗೆ ಹಂತಕನನ್ನು ನಿಯೋಜಿಸಿದ್ದಕ್ಕಾಗಿ ಪ್ರೀತಿಯನ್ನು 2005ರಲ್ಲಿ ಬಂಧಿಸಲಾಗಿತ್ತು.
Next Story





