ಹಣಕಾಸಿನ ವಿವಾದ:ತಮಿಳುನಾಡಿನಲ್ಲಿ ‘ಬಾಹುಬಲಿ 2’ಬೆಳಗಿನ ಪ್ರದರ್ಶನಗಳು ರದ್ದು

ಚೆನ್ನೈ,ಎ.28: ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಾದ್ಯಂತ ಎಲ್ಲ ಚಲನಚಿತ್ರ ಮಂದಿರಗಳಲ್ಲಿ ‘ಬಾಹುಬಲಿ 2’ ಚಿತ್ರದ ಶುಕ್ರವಾರ ಬೆಳಗಿನ ಪ್ರದರ್ಶನ ಗಳನ್ನು ರದ್ದುಗೊಳಿಸಲಾಗಿತ್ತು.
ಬೆಳಗಿನ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಿದ ಚಲನಚಿತ್ರ ಮಂದಿರಗಳ ಮಾಲಿಕರು, ವೀಕ್ಷಕರಿಗೆ ಮಾಹಿತಿ ನೀಡಲು ಹೊರಗಡೆ ಸೂಚನಾ ಫಲಕಗಳನ್ನು ಅಳವಡಿಸಿದ್ದರು. ಆದರೆ ಪ್ರದರ್ಶನ ರದ್ದುಗೊಳಿಸಲು ಯಾವುದೇ ಕಾರಣ ನೀಡದಿದ್ದುದು ಎಸ್.ಎಸ್. ರಾಜವೌಳಿ ನಿರ್ದೇಶನದ ಚಿತ್ರದ ಅಂತಿಮ ಭಾಗವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಿನಿರಸಿಕರನ್ನು ಕೆರಳಿಸಿತ್ತು.
ಚಿತ್ರದ ನಿರ್ಮಾಪಕರು ಮತ್ತು ತಮಿಳು ಅವತರಣಿಕೆಯ ವಿತರಕರ ನಡುವಿನ ಹಣಕಾಸು ವಿವಾದ ಚಿತ್ರದ ಬಿಡುಗಡೆ ವಿಳಂಬಗೊಳ್ಳಲು ಕಾರಣವಾಗಿತ್ತೆಂದು ವರದಿಗಳು ತಿಳಿಸಿವೆ.
Next Story





