‘ಬಾಹುಬಲಿ 2’ ಚಿತ್ರವನ್ನು ಇಂಟರ್‌ವಲ್‌ನಿಂದ ಪ್ರದರ್ಶಿಸಿದ ಬೆಂಗಳೂರಿನ ಥಿಯೇಟರ್!
ಬೆಂಗಳೂರು,ಎ.28: ದೇಶಾದ್ಯಂತ ‘ಬಾಹುಬಲಿ 2’ ಚಿತ್ರದ ಹವಾ ಎದ್ದಿದೆ. ಅಭಿಮಾನಿಗಳು ನಸುಕಿನಿಂದಲೇ ಥಿಯೇಟರ್‌ಗಳ ಮುಂದೆ ಕಾದು ಕುಳಿತಿದ್ದರೆ, ಹಲವಾರು ಜನರು ಚಿತ್ರ ನೋಡಲೆಂದೇ ಉದ್ಯೋಗಕ್ಕೆ ಅರ್ಧ ದಿನದ ರಜೆ ಹಾಕಿದ್ದಾರೆ. ನಾಯಕ ನಟ ಪ್ರಭಾಸ್ ಕಟೌಟ್‌ಗೆ ಹಾಲಿನ ಅಭಿಷೇಕವೂ ನಡೆದಿದೆ. ಇವೆಲ್ಲವುಗಳ ನಡುವೆ ಬೆಂಗಳೂರಿನಲ್ಲಿ ಮೋಜಿನ...ಆದರೆ ಅಭಿಮಾನಿಗಳಿಗೆ ಅಷ್ಟೇ ಬೇಸರದ ವಿಲಕ್ಷಣ ವಿದ್ಯಮಾನ ನಡೆದಿದೆ.
ನಗರದ ಪಿವಿಆರ್ ಅರೆನಾ ಮಾಲ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಚಿತ್ರ ಪ್ರದರ್ಶನ ಆರಂಭಗೊಂಡಿತ್ತು. ಖುಷಿಯಿಂದಲೇ ಚಿತ್ರ ನೋಡುತ್ತಿದ್ದ ಜನರಿಗೆ ಕ್ಲೈಮಾಕ್ಸ್ ದೃಶ್ಯ ಬರುವವರೆಗೂ ತಾವು ಚಿತ್ರವನ್ನು ಇಂಟರ್‌ವಲ್‌ನಿಂದ ವೀಕ್ಷಿಸುತ್ತಿದ್ದೇವೆ ಎನ್ನುವ ಸತ್ಯ ಗೊತ್ತೇ ಆಗಿರಲಿಲ್ಲ. ಗೊತ್ತಾದಾಗ ಆಕ್ರೋಶಗೊಂಡು ಥಿಯೇಟರ್‌ನ ವ್ಯವಸ್ಥಾಪಕರನ್ನು ತರಾಟೆಗೆತ್ತಿಕೊಂಡು ಚಿತ್ರವನ್ನು ಪುನಃ ಆರಂಭದಿಂದಲೇ ಪ್ರದರ್ಶಿಸುವಂತೆ ಮಾಡಿದ್ದಾರೆ.
Next Story









