ಶಾರುಖ್ ಚಿತ್ರಕ್ಕೆ ಆಲಿಯಾ?

ಶಾರುಖ್ ಅಭಿನಯದ ಚಿತ್ರದಿಂದ ದೀಪಿಕಾ ಪಡುಕೋಣೆ ನಿರ್ಗಮಿಸಿದ್ದಾರೆಂಬ ಸುದ್ದಿ ಕಳೆದ ವಾರ ಬಾಲಿವುಡ್ ಚಿತ್ರರಂಗವನ್ನು ಚಕಿತಗೊಳಿಸಿತ್ತು. ‘ತನು ವೆಡ್ಸ್ ಮನು’ ಸರಣಿ ಚಿತ್ರಗಳ ಖ್ಯಾತಿಯ ಆನಂದ್ ಎಲ್.ರಾಯ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಅಥವಾ ಕತ್ರಿನಾ ಕೈಫ್ ಹಿರೋಯಿನ್ ಆಗಿ ನಟಿಸಲಿದ್ದಾರೆಂದು ಹೇಳಲಾಗಿತ್ತು. ಆದರೆ ಈಗ ಬಂದಿರುವ ತಾಜಾ ಸುದ್ದಿಯ ಪ್ರಕಾರ ದೀಪಿಕಾ ಈ ಚಿತ್ರದಲ್ಲಿ ನಟಿಸುವುದಿಲ್ಲವೆಂಬುದು ಕನ್‌ಫರ್ಮ್ ಆಗಿದೆ.
ಸಂಜಯ್ ಲೀಲಾ ಬನ್ಸಾ ಲಿಯವರ ‘ಪದ್ಮಾವತಿ’ ಚಿತ್ರದ ಶೂಟಿಂಗ್ ವಿಳಂಬವಾಗಿ ನಡೆಯುತ್ತಿರುವುದರಿಂದ ದೀಪಿಕಾ ಆ ಚಿತ್ರಕ್ಕಾಗಿ ಇನ್ನೂ ಹೆಚ್ಚು ಡೇಟ್ಸ್‌ಗಳನ್ನು ನೀಡಿದ್ದಾರೆ. ಹೀಗಾಗಿ ಶಾರುಖ್ ಚಿತ್ರಕ್ಕೆ ಆಕೆಗೆ ಸಮಯ ಹೊಂದಿಸಿಕೊಳ್ಳಲಾಗುತ್ತಿಲ್ಲವಂತೆ. ಆದರೆ ಈಗ ಬಾಲಿವುಡ್‌ನಲ್ಲಿ ಬಲವಾಗಿ ಹರಡಿರುವ ವದಂತಿಗಳ ಪ್ರಕಾರ ದೀಪಿಕಾ ನಿರ್ವಹಿಸಲಿದ್ದ ಪಾತ್ರಕ್ಕಾಗಿ ಆಲಿಯಾ ಭಟ್‌ಳನ್ನು ಸಂಪರ್ಕಿಸಲಾಗಿದೆಯಂತೆ. ‘ಯೇ ಜಿಂದಗಿ’ ಚಿತ್ರದಲ್ಲಿ ಶಾರುಖ್ ಹಾಗೂ ಆಲಿಯಾ ಭಟ್ ಅವರ ಅಭಿನಯ ಜುಗಲ್ ಬಂದಿ ಪ್ರೇಕ್ಷಕರ ಮೆಚ್ಚುಗೆಗಳಿಸಿತ್ತು. ಆಲಿಯಾ ಕೂಡಾ ಚಿತ್ರದಲ್ಲಿ ನಟಿಸುವ ಬಗ್ಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.





