ಕೇರಳವನ್ನೇ ನಡುಗಿಸಿದ್ದ ಜಿಶಾ ಕೊಲೆ ಪ್ರಕರಣಕ್ಕೆ ಒಂದು ವರ್ಷ

ಕೊಚ್ಚಿ,ಎ. 28: ಪೆರುಂಬಾವೂರ್ ಜಿಶಾ ಕೊಲೆಪ್ರಕರಣಕ್ಕೆ ಇಂದಿಗೆ ಪೂರ್ತಿ ಒಂದುವರ್ಷ. ಕಳೆದವರ್ಷ ಎಪ್ರಿಲ್ 28ಕ್ಕೆ ಪೆರುಂಬಾವೂರ್ ಜಿಶಾ ಎನ್ನುವ ಕಾನೂನು ವಿದ್ಯಾರ್ಥಿನಿ ತನ್ನ ಮನೆಯಲ್ಲೇ ಅತಿಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ರೀತಿಯಲ್ಲಿ ಕಂಡು ಬಂದಿದ್ದರು. ಜಿಶಾರ ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿ ಎಂಟೂವರೆ ಗಂಟೆ ವೇಳೆಗೆ ಜಿಶಾರ ಮೃತಶರೀರವನ್ನು ನೋಡಿದ್ದರು.
ವಿಧಾನಸಭಾ ಚುನಾವಣೆ ಪ್ರಚಾರನಡೆಯುತ್ತಿದ್ದ ವೇಳೆಯಲ್ಲಿ ನಾಡನ್ನೇ ನಡುಗಿಸಿದ ಈ ಕೊಲೆಕೃತ್ಯವನ್ನು ಎಲ್ಲ ರಾಜಕೀಯ ಪಕ್ಷ ಗಳು ಪ್ರಚಾರದ ಅಸ್ತ್ರವನ್ನಾಗಿ ಬಳಸಿಕ್ಕೊಂಡಿದ್ದವು. ರಾಷ್ಟ್ರೀಯ ಮಟ್ಟದಲ್ಲಿಯೂ ಘಟನೆ ಚರ್ಚಾ ವಿಷಯವಾಗಿತ್ತು. ತಿಂಗಳೊಳಗೆ ಅಸ್ಸಾಂನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು.
ಕೇಸಿನ ರಹಸ್ಯವಿಚಾರಣೆ ಎರ್ನಾಕುಲಂ ಪ್ರಿನ್ಸಿಪಲ್ ಸೆಶನ್ಸ್ ಕೋರ್ಟಿನಲ್ಲಿ ನಡೆಯುತ್ತಿದೆ. ಪ್ರಕರಣದ ಆರೋಪ ಪಟ್ಟಿ ಕುರಿತು ಮತ್ತು ಪ್ರಕರಣ ತನಿಖೆಯ ಕುರಿತು ಈಗಲೂ ಸಂದೇಹ ಮುಂದುವರಿದಿದೆ. ಪ್ರಕರಣದಲ್ಲಿ ಈವರೆಗೆ 13ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಆಗಸ್ಟ್‌ತಿಂಗಳಲ್ಲಿ ವಿಚಾರಣೆ ಪೂರ್ಣಗೊಳ್ಳಬಹುದು ಎನ್ನುವುದು ಪ್ರಾಸಿಕ್ಯೂಶನ್ ನಿರೀಕ್ಷೆಯಾಗಿದೆ.





