ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್: ವಿಧವೆಯರಿಗೆ ಧನಸಹಾಯ
ಮಂಗಳೂರು, ಎ.28: ಬಡವರಿಗೆ ಸಹಾಯ ನೀಡುವುದು ಅತ್ಯಂತ ದೊಡ್ಡ ಸತ್ಕರ್ಮವಾಗಿದೆ. ಅದಕ್ಕೆ ಅಲ್ಲಾಹನ ಬಳಿ ಮಹತ್ತರ ಪ್ರತಿಫಲವೂ ಇದೆ. ಸಂಘಟನೆಗಳು ರಿಲೀಫ್ ಚಟುವಟಿಕೆಗಳತ್ತ ಹೆಚ್ಚು ಗಮನ ನೀಡಬೇಕಾದದ್ದು ಕಾಲದ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎರಡು ವರ್ಷಗಳಲ್ಲಿ ಮೂವತ್ತು ಲಕ್ಷ ರೂ.ಗಳನ್ನು ಕೇವಲ ರಿಲೀಫ್ ಚಟುವಟಿಕೆಗಳಿಗೆ ಖರ್ಚು ಮಾಡಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಇತರರಿಗೆ ಮಾದರಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಎಸ್‌ವೈಎಸ್ ಕೇರಳ ರಾಜ್ಯ ಸಾಂತ್ವನ ವಿಭಾಗದ ಅಧ್ಯಕ್ಷ ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಹೇಳಿದರು.
ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವೀಸ್ ವತಿಯಿಂದ ವಿಧವೆಯರಿಗೆ ಧನ ಸಹಾಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಮರಣ ಹೊಂದಿದ ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಕರೋಪಾಡಿಯವರಿಗೆ ಎಸ್ಸೆಸ್ಸೆಫ್ ಮಂಜೇಶ್ವರ ಸೆಕ್ಟರ್, ಯಾಕೂಬ್ ನಈಮಿ ಅಲ್-ಅಫ್ಳಲಿ ನೇತೃತ್ವದಲ್ಲಿ ತಹ್ಲೀಲ್ ಸಮರ್ಪಿಸಲಾಯಿತು. ಸೆಕ್ಟರ್ ಉಪಾಧ್ಯಕ್ಷ ಶಮೀರ್ ಸೇವಂತಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ ಇಫ್ತಾರ್ ಮೀಟ್‌ಗೆ ವ್ಯವಸ್ಥೆ ಮಾಡಿದರು.
ಶಾಜಹಾನ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವೀಸ್ ಅಧ್ಯಕ್ಷ ಅಲ್ತಾಫ್ ಕುಂಪಲ, ಉಪಾಧ್ಯಕ್ಷ ಶೌಕತ್ ಪಟ್ಲ, ಉಪ ಸಂಚಾಲಕ ನೌಫಲ್ ಮಾರ್ಗತಲೆ, ರಿಲೀಫ್ ಸರ್ವೀಸ್ ಕೋಶಾಧಿಕಾರಿ ಶಮೀರ್ ಹಿದಾಯತ್ ನಗರ, ಕಾರ್ಯದರ್ಶಿ ಮನ್ಸೂರ್ ಚೆಂಬುಗುಡ್ಡೆ, ಶಮೀರ್ ಮದನಿ ನಗರ, ಕೋಶಾಧಿಕಾರಿ ಜುನೈದ್ ಮದನಿ ನಗರ, ಸೆಕ್ಟರ್ ಎಸ್.ಬಿ.ಎಸ್. ಕನ್ವೀನರ್ ಸಾಲಿಂ ಪಟ್ಲ, ಸದಸ್ಯರಾದ ಸಂಶೀರ್ ಸಂತೋಷ್ ನಗರ, ಎಸ್ಸೆಸ್ಸೆಫ್ ಮಂಗಳೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಿಝಾಮುದ್ದೀನ್ ಶಾ, ಅತೀಕ್ ಕೋಡಿ ಉಪಸ್ಥಿತರಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್. ಅಳೇಕಲ ಕಾರ್ಯಕ್ರಮವನ್ನು ಸ್ವಾಗತಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಬಾತಿಷ್ ಮಂಚಿಲ ವಂದಿಸಿದರು.







