ಕಣ್ಣೂರು: ಬಲ್ಲೂರುಗುಡ್ಡೆಗೆ ಐವನ್ ಡಿಸೋಜ ಭೇಟಿ

ಮಂಗಳೂರು, ಎ. 28: ನಗರದ ಕಣ್ಣೂರಿನ ಬಲ್ಲೂರುಗುಡ್ಡೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕಣ್ಣೂರು ಬೀಡಿನಲ್ಲಿರುವ ಡ್ರೈನೇಜ್ ಬ್ಲಾಕ್ ಆಗಿರುವ ಬಗ್ಗೆ ವೀಕ್ಷಿಸಿ, ಅದರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಕೂಡಲೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಮ್ಮರಬ್ಬ ಕಣ್ಣೂರು, ಅಬಿಬುಲ್ಲ ಕನ್ನೂರು, ಮೋನು ಪೋಸ್ಟು, ಐ ಮೋನು, ಝೈನುದ್ದೀನ್ ಗುಡ್ಡೆ, ಚೆಯ್ಯೆ, ಹುಸೇನ್ ಕುಂಡಾಲ, ಅಶ್ರಫ್ ಬೀಡು, ಕಾಬು ಕಣ್ಣೂರು, ರಫೀಕ್ ಮುಂತಾದವರು ಉಪಸ್ಥಿತರಿದ್ದರು.
Next Story





