ನಾಳೆ ಉಪ್ಪಿನಂಗಡಿಗೆ ನೌಶಾದ್ ಬಾಖವಿ
ಉಪ್ಪಿನಂಗಡಿ, ಎ.28: ಖ್ಯಾತ ವಾಗ್ಮಿ ಎ.ಎಂ.ನೌಶಾದ್ ಬಾಖವಿ ಎ.30ರಂದು ಉಪ್ಪಿನಂಗಡಿಗೆ ಆಗಮಿಸಲಿದ್ದಾರೆ.
ಇಲ್ಲಿನ ಮಾಲಿಕ್ ದೀನಾರ್ ಜುಮಾ ಮಸೀದಿ ವತಿಯಿಂದ ಅಂದು 7ಕ್ಕೆ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸುವರು. ಆತೂರು ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಅಸ್ಸೈಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ದುಆಗೈಯುವರು. ಮಾಲಿಕ್‌ದೀನಾರ್ ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ ಫೈಝಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





