ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ "ನ್ಯಾಶನಲ್ ಎಜ್ಯುಕೇಶನ್ ಎಕ್ಸಲೆನ್ಸ್ ಅವಾರ್ಡ್"

ಮಂಗಳೂರು, ಎ.28: ಇತ್ತೀಚೆಗೆ ಹೊಸದಿಲ್ಲಿಯ ಹೊಟೇಲ್ ಶಾಂಗ್ರಿ-ಲಾ ಇರೊಸ್ ನಲ್ಲಿ ನಡೆದ ಪ್ರತಿಷ್ಠಿತ ನ್ಯಾಶನಲ್ ಎಜ್ಯುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ ಪ್ರಶಸ್ತಿ ಸಮಾರಂಭದಲ್ಲಿ ಮಂಗಳೂರು ಜಪ್ಪಿನಮೊಗರಿನ ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಸ್ಕೂಲ್ "ಉತ್ತಮ ಸಿಬಿಎಸ್‌ಇ ಶಾಲೆ" ಪ್ರಶಸ್ತಿಯನ್ನು ಗಳಿಸಿದೆ.
ಸಮಾರಂಭದಲ್ಲಿ ಉತ್ತರ ಪ್ರದೇಶದ ಸಚಿವ, ಮಾಜಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಚೇತನ್ ಚವಾಣ್ ಮತ್ತು ಎನ್‌ಸಿಇಆರ್‌ಟಿ ಡೀನ್ ಪ್ರೊ. ಸರೋಜಾ ಯಾದವ್ ಪ್ರೆಸ್ಟೀಜ್ ಶಾಲೆಯ ಚೇರ್ ಮೆನ್ ಹೈದರ್ ಅಲಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಂಸದ ಅಮರ್ ಸಿಂಗ್, ಕ್ರಿಕೆಟಿಗ ನಯನ್ ಮೊಂಗಿಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಭಾರತದ ಪ್ರಮುಖ ಮಾಧ್ಯಮ ಹಾಗೂ ಮಾರುಕಟ್ಟೆ ಸಮೂಹಸಂಸ್ಥೆ ಪ್ರಾಕ್ಸಿಸ್ ಮೀಡಿಯಾ, ಶಿಕ್ಷಣ ಮತ್ತು ಕಲಿಕೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು, ಹಾಗೂ ಪ್ರೋತ್ಸಾಹಿಸಲು ಈ ಪ್ರಶಸ್ತಿಯನ್ನು ಪ್ರದಾನ ಸಮಾರಂಭವನ್ನು ಆಯೋಜಿಸುತ್ತದೆ. ಶಿಕ್ಷಣ ವಲಯದಲ್ಲಿ ಶ್ರೇಷ್ಠತೆ, ವಿನೂತನ ಪ್ರಯೋಗಗಳ ಹಾಗೂ ಅನುಕರಣೀಯ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ.





