ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ನೀರಜ್ ಚೋಪ್ರಾ ಅರ್ಹತೆ

ಹೊಸದಿಲ್ಲಿ, ಎ.28: ಭಾರತದ ವರ್ಲ್ಡ್ ಜೂನಿಯರ್ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಐಎಎಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಚೀನಾದ ಜಿಯಾಕ್ಸಿಂಗ್‌ನಲ್ಲಿ ಗುರುವಾರ ನಡೆದ ಏಷ್ಯನ್ ಜಿಪಿ ಟೂರ್ನಿಯಲ್ಲಿ 83.32 ಮೀ.ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕವನ್ನು ಜಯಿಸಿದ್ದ 19ರ ಹರೆಯದ ಚೋಪ್ರಾ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು. ಭಾರತದ ಒಟ್ಟು 12 ಅಥ್ಲೀಟ್‌ಗಳು ವಿಶ್ವ ಕೂಟಕ್ಕೆ ಅರ್ಹತೆ ಪಡೆದಿದ್ದಾರೆ.
ನೀನಾ ವರಾಕಿಲ್ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಚಿನ್ನ ಜಯಿಸಿದರೆ, ದುತೀ ಚಂದ್ ಮಹಿಳೆಯರ 100 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದರು. ಟಿಂಟು ಲೂಕ 800 ಮೀ. ಓಟದಲ್ಲಿ 2:06.32 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದ್ದಾರೆ.
Next Story





