ಹೃದಯಾಘಾತದ ಬಳಿಕ ಚಿಂತಾಜನಕ ಸ್ಥಿತಿಯಲ್ಲಿ ದಾವೂದ್ ಇಬ್ರಾಹೀಂ?

ಹೊಸದಿಲ್ಲಿ, ಎ.29: ಭೂಗತಪಾತಕಿ ದಾವೂದ್ ಇಬ್ರಾಹೀಂಗೆ ಕರಾಚಿಯಲ್ಲಿ ಹೃದಯಾಘಾತವಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಿಎನ್ ಎನ್ ನ್ಯೂಸ್ 18 ವರದಿ ಮಾಡಿದೆ.
ಆದರೆ ಈ ಸುದ್ದಿಯನ್ನು ಇಬ್ರಾಹೀಂನ ಬಂಟ ಛೋಟಾ ಶಕೀಲ್ ನಿರಾಕರಿಸಿದ್ದು, "ದಾವೂದ್ ಆರೋಗ್ಯದಿಂದಿದ್ದಾರೆ" ಎಂದು ಹೇಳಿದ್ದಾನೆ.
ದಾವೂದ್ ಕರಾಚಿಯ ವಿಲಾಸಿ ಪ್ರದೇಶ ಕ್ಲಿಫ್ಟನ್ ನಲ್ಲಿರುವ ಬಂಗಲೆಯೊಂದರಲ್ಲಿ ವಾಸವಾಗಿದ್ದು, ಆತನ ಕಾಲಿನಲ್ಲಿ ಗ್ಯಾಂಗ್ರಿನ್ ಆಗಿದೆ ಎಂದು ಈ ಹಿಂದೆ ಇದೇ ಸುದ್ದಿವಾಹಿನಿ ವರದಿ ಮಾಡಿತ್ತು. ಹಿರಿಯ ಪತ್ರಕರ್ತ ಭೂಪೇಂದ್ರ ಚೌಬೆ ಶುಕ್ರವಾರ ತಡರಾತ್ರಿ ಟ್ವೀಟ್ ಮಾಡಿದ್ದು, ದಾವೂದ್ ಮೃತಪಟ್ಟಿದ್ದಾನೆ ಎಂದು ಕೆಲವು ಮೂಲಗಳಿಂದ ಅನಧಿಕೃತ ವರದಿಗಳು ಬಂದಿದೆ ಎಂದು ಹೇಳಿದ್ದಾರೆ.
61 ವರ್ಷದ ದಾವೂದ್ ಇಬ್ರಾಹೀಂ 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಪ್ರಧಾನ ಆರೋಪಿಯಾಗಿದ್ದು, ಭಾರತಕ್ಕೆ ಬೇಕಾದವನಾಗಿದ್ದೇನೆ. ಈ ಸ್ಫೋಟಗಳಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
Next Story





