ಪಿಲಿಕುಳ ನಿಸರ್ಗಧಾಮದೊಳಗೆ ಮಿನಿ ಬಸ್ ಸೌಲಭ್ಯ
ಮಂಗಳೂರು, ಎ.29: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ಬಸ್ಸಿನಲ್ಲಿ ಬರುವ ಪ್ರವಾಸಿಗರನ್ನು ನಿರ್ಗಧಾಮದ ಒಳಗಡೆ ವಿವಿಧ ಘಟಕಗಳಿಗೆ ಕರೆದೊಯ್ಯಲು ಮೇ 1ರಿಂದ ಮಿನಿ ಬಸ್ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ.
"ಪಿಲಿಕುಳ ದರ್ಶನ" ಎಂಬ ಹೆಸರಿನಲ್ಲಿ ಈ ಬಸ್ ವ್ಯವಸ್ಥೆಯ ಮೂಲಕ ಪ್ರವಾಸಿಗರು ಪಿಲಿಕುಳದ ವಿವಿಧ ಘಟಕಗಳಿಗೆ ಪ್ರಯಾಣಿಸಬಹುದು. ದೂರದ ಊರುಗಳಿಂದ ಬರುವ ಪ್ರವಾಸಿಗರು ವಾಮಂಜೂರಿನ ಟಿ.ಬಿ. ಆಸ್ಪತ್ರೆ ಬಳಿ ಇಳಿದಲ್ಲಿ ಅಲ್ಲಿಂದ ಈ ಮಿನಿ ಬಸ್ ಮೂಲಕ ಪಿಲಿಕುಳದ ಎಲ್ಲಾ ಘಟಕಗಳಿಗೆ ಪ್ರಯಾಣಿಸಬಹುದು. ಬೆಳಿಗ್ಗೆ 9:3ರಿಂದ ಸಂಜೆ 5:30 ರವರೆಗೆ ಗಂಟೆಗೆ ಒಂದು ಸಲದಂತೆ ಈ ವಾಹನ ಪ್ರಯಾಣ ಬೆಳೆಸಲಿದೆ ಎಂದು ನಿಸರ್ಗಧಾಮದ ಪ್ರಕಟನೆ ತಿಳಿಸಿದೆ
Next Story





