"ವಿಶ್ವಾಸ್ ಕ್ರಿಸ್ಟಲ್" ವಸತಿ ಸಮುಚ್ಚಯ ಉದ್ಘಾಟನೆ

ಮಂಗಳೂರು, ಎ.29: ವಿಶ್ವಾಸ್ ಬಾವಾ ಬಿಲ್ಡರ್ಸ್ ನಗರದ ಬೋಳಾರದಲ್ಲಿ ನಿರ್ಮಿಸಿದ ವಸತಿ ಸಮುಚ್ಚಯ "ವಿಶ್ವಾಸ್ ಕ್ರಿಸ್ಟಲ್" ಉದ್ಘಾಟನೆಗೊಂಡಿದೆ.
ಯೆನೆಪೊಯ ಸಮೂಹ ಸಂಸ್ಥೆಗಳ ನಿರ್ದೇಶಕ ವೈ. ಜಾವೇದ್, ಸ್ಥಳೀಯ ಕಾರ್ಪೊರೇಟರ್ ರತಿಕಲಾ ಮತ್ತು ರೊಸಾರಿಯೋ ಪಿ.ಯು. ಕಾಲೇಜಿನ ಪ್ರಾಂಶುಪಾಲ ಫಾ. ವಿನ್ಸೆಂಟ್ ಡಿಸೋಜ ವಸತಿ ಸಮುಚ್ಚಯವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಶಕ್ತಿ ಸಾಗರ್ ಫರ್ನಿಚರ್ಸ್‌ನ ಗೋಪಾಲ ಸುವರ್ಣ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಪೃಥ್ವಿರಾಜ್, ಹೋಟೆಲ್ ಫುಡ್‌ಲ್ಯಾಂಡ್ಸ್ ನ ಎಂ. ಗಣೇಶ್ ಶೆಟ್ಟಿ, ತೇಜಸ್ ಲ್ಯಾಬ್ಸ್ ನಿರ್ದೇಶಕ ಡಾ. ಪ್ರಕಾಶ್ ಶೆಟ್ಟಿ, ಚಾರ್ಟರ್ಡ್ ಅಕೌಂಟೆಂಟ್ ಸಿ.ಎ. ಝಮೀರ್ ಅಂಬರ್, ಉದ್ಯಮಿ ಜಾರ್ಜ್ ಮೊದಲಾದವರು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುರ್ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಟ್ಟಡದ ವಾಸ್ತುಶಿಲ್ಪಿ ದಾಮೋದರ ಶೆಣೈ, ಕಂಟ್ರಾಕ್ಟರ್ ಎಂ ಬಷೀರ್ ರನ್ನು ಸನ್ಮಾನಿಸಲಾಯಿತು. ಸೂಪರ್‌ವೈಸರ್ಸ್ ಮತ್ತು ನಿರ್ಮಾಣದ ವಿವಿಧ ವಿಭಾಗಗಳ ಮುಖ್ಯಸ್ಥರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಪಾಲುದಾರ ಅಶ್ರಫ್ ಜಿ. ಬಾವ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.