ಮೇ 1: ಕಾರ್ಮಿಕ ದಿನಾಚರಣೆ
ಮಂಗಳೂರು, ಎ.29:ದ.ಕ.ಜಿಲ್ಲೆಯಲ್ಲಿ ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರ ನೇತೃತ್ವದಲ್ಲಿ ವಿವಿಧ ಕಡೆ ಮೇ 1ರಂದು ಕಾರ್ಮಿಕ ದಿನಾಚರಣೆ ನಡೆಯಲಿದೆ.
ಅಂದು ಪೂ.11ಕ್ಕೆ ನಗರದ ಕರಾವಳಿ ಸಭಾಂಗಣದಲ್ಲಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ನೇತೃತ್ವದಲ್ಲಿ ಕಾರ್ಮಿಕ ದಿನಾಚರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ವಹಿಸಲಿದ್ದಾರೆ.
ಟೆಂಪೋ ಚಾಲಕ/ಮಾಲಕರ ಕಾರ್ಮಿಕ ದಿನಾಚರಣೆಯು ಕೂಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಟೆಂಪೋ ಚಾಲಕರ ಸರಕಾರಿ ಪಿಂಚಣಿ ಯೋಜನೆಯ ಕಾರ್ಡ್ ವಿತರಿಸಲಾಗುವುದು.
ದ.ಕ. ಜಿಲ್ಲಾ ಬಸ್ ಮಾಲಕರ ಕಾರ್ಮಿಕ ದಿನಾಚರಣೆಯು ಮನಪಾ ಕಚೇರಿಯಲ್ಲಿ ಬೆಳಗ್ಗೆ 9:30ಕ್ಕೆ ನಡೆಯಲಿದೆ. ಈ ಸಂದರ್ಭ ಹಿರಿಯ ಕಾರ್ಮಿಕರಿಗೆ ಸನ್ಮಾನ, ಅಸಂಘಟಿತ ಕಾರ್ಮಿಕರಿಗೆ ಇನ್ಸುರೆನ್ಸ್ ಕಾರ್ಡ್ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಅಶ್ರಫ್ , ಕಾರ್ಮಿಕ ಅಧಿಕಾರಿ ಹಿಲ್ಡಾ ಭಾಗವಹಿಸುವರು.
ಮಂಗಳೂರು ಮಹಾನಗರ ಆಟೊ ರಿಕ್ಷಾ ಚಾಲಕರ ಕಾರ್ವಿಕ ದಿನಾಚರಣೆಯು ಡಾನ್ ಬಾಸ್ಕೋ ಹಾಲ್‌ನಲ್ಲಿ ಪೂ.11 ಗಂಟೆಗೆ ನಡೆಯಲಿದೆ. ಕಾರ್ಮಿಕರ ಮಕ್ಕಳಿಗೆ ವಿವಿಧ ಸ್ಫರ್ಧೆಗಳು ಡ್ಯಾನ್ಸ್, ಸಂಗೀತ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿವಿಧ ಅಪಘಾತರಹಿತ ಚಾಲಕರಿಗೆ ಸನ್ಮಾನ ಕಾರ್ಯಕ್ರಮ, ಉಪನ್ಯಾಸ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.







