Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೊಳ್ಳೇಗಾಲ ಅರಣ್ಯ ಇಲಾಖೆಯಲ್ಲಿ, ಹಿರಿಯ...

ಕೊಳ್ಳೇಗಾಲ ಅರಣ್ಯ ಇಲಾಖೆಯಲ್ಲಿ, ಹಿರಿಯ ಅರಣ್ಯಾಧಿಕಾರಿಗಳು. ವಲಯ ಅರಣ್ಯಾಧಿಕಾರಿಗಳಿಂದ ಅವ್ಯಾವಹಾರ.

ವಾರ್ತಾಭಾರತಿವಾರ್ತಾಭಾರತಿ29 April 2017 7:15 PM IST
share
ಕೊಳ್ಳೇಗಾಲ ಅರಣ್ಯ ಇಲಾಖೆಯಲ್ಲಿ, ಹಿರಿಯ ಅರಣ್ಯಾಧಿಕಾರಿಗಳು. ವಲಯ ಅರಣ್ಯಾಧಿಕಾರಿಗಳಿಂದ ಅವ್ಯಾವಹಾರ.

ಹನೂರು. ಎ 29 : ಅರಣ್ಯ ಅಭಿವೃದ್ದಿ ಮತ್ತು ಸಂರಕ್ಷಣೆಗಾಗಿ ಸರಕಾರ ವಿವಿದ ಯೋಜನೆಗಳನ್ನು ಕೋಟ್ಯಾಂತರ ರೂಪಾಯಿ ಅನುದಾನಗಳಿಂದ  ಬಿಡುಗಡೆಗೊಳಿಸುತ್ತಿದೆಯಾದರೂ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಹೊಣೆ ಅಧಿಕಾರಿಗಳದ್ದಾಗಿದೆ.

ಆದರೆ ವಲಯಾಧಿಕಾರಿಗಳು ಅಭಿವೃದ್ಧಿ ಹಾಗೂ ರಕ್ಷಣೆಯನ್ನು ಕಡೆಗಣಿಸಿ ಸ್ವ-ಅಭಿವೃದ್ದಿಗೆ ಮುಂದಾಗಿ ಇಲಾಖಾ ನೀತಿ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿದ್ದಾರೆ.

ಅಭಿವೃದ್ದಿಯ ನೆಪದಲ್ಲಿ ಹಣ ದುರ್ಬಳಕೆಗೆ ಮುಂದಾಗುವ ಮೂಲಕ ತಾಲೂಕಿನ ಹಿರಿಯ ಅಧಿಕಾರಿಗಳು ಕಮೀಷನ್ ಏಜೆಂಟರ್ ಗಳಾಗಿದ್ದಾರೆ, ಎರಡೂ ವಿಭಾಗಗಳ ವಲಯ ಅರಣ್ಯಾಧಿಕಾರಿಗಳು ಬೇನಾಮಿ ಗುತ್ತಿಗೆದಾರರಾಗುವ ಮೂಲಕ ದುರಾಡಳಿತ ನಡೆಸಿ ಸರಕಾರದ ಆಶಯ ಈಡೇರದಿದ್ದರೂ ಅನುದಾನಗಳನ್ನು ದುರ್ಬಳಕೆ ಮಾಡಿಕೊಳ್ಳುವಲ್ಲೇ ಕಾಲಹರಣ ಮಾಡುತ್ತಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ವನ್ಯಜೀವಿ ವಿಭಾಗ ಹಾಗೂ ಮ.ಮ.ವನ್ಯಜೀವಿ ವಿಭಾಗದಲ್ಲಿ ದಂಪತಿಗಳೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವುದರಿಂದ ಎರಡು ವಿಭಾಗಗಳಲ್ಲೂ ಇವರದೇ ಕಾರುಬಾರಾಗಿದ್ದು, ಇಲಾಖೆಯ ನೀತಿ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ದುರಾಡಳಿತ ನಡೆಸುವ ಮೂಲಕ ಅರಣ್ಯ ಹಾಗೂ ಕಛೇರಿ ಮತ್ತಿತರೆ ಅಭಿವೃದ್ದಿ ಕಾಮಗಾರಿಗಳಲ್ಲಿ ವ್ಯಾಪಕ ಅವ್ಯಾವಹಾರ ನಡೆಸಿ ಇಲಾಖೆಯ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ.

ಕೊಳ್ಳೇಗಾಲದ ಕೇಂದ್ರ ಸ್ಥಾನದಲ್ಲಿರುವ ಮ.ಮ.ವನ್ಯಜೀವಿ ವಿಭಾಗದ ಕಛೇರಿ ಕಟ್ಟಡದ ನವೀಕರಣಕ್ಕೆ 40 ಲಕ್ಷ ಹಾಗೂ ವಸತಿಗೃಹದ ನವೀಕರಣಕ್ಕೆ 25 ಲಕ್ಷ, ಹನೂರಿನ ವಲಯ ಅರಣ್ಯಾಧಿಕಾರಿಗಳ ಕಛೇರಿ ಆವರಣದಲ್ಲಿನ ಅತಿಥಿಗೃಹ ಸೇರಿದಂತೆ ಈ ಎರಡೂ ವಿಭಾಗಗಳ ವ್ಯಾಪ್ತಿಯ ಅರಣ್ಯ ಸಮೀಪದಲ್ಲಿ ಕಳ್ಳಬೇಟೆ ತಡೆ ಶಿಬಿರಗಳು ಸೇರಿದಂತೆ ಬಹುತೇಕ ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಕರೆಯದೆ ಜಿಲ್ಲೆಯ ನಿರ್ಮಿತಿ ಕೇಂದ್ರಕ್ಕೂ ನೀಡದೆ ನಮ್ಮ ಜಿಲ್ಲೆಯವರೇ ಅಲ್ಲದ ದೂರದ ಮಂಗಳೂರು ಮೂಲದ ಪುತ್ತೂರಿನ ನಿರ್ಮಿತಿ ಕೇಂದ್ರದವರಿಗೆ ನೀಡಿರುವುದು ಇವರ ಅಕ್ರಮ ಅವ್ಯವಹಾರಗಳಿಗೆ ಸ್ಪಷ್ಟ ನಿದರ್ಶನವಾಗಿದೆ.

ಇದಲ್ಲದೆ ತಾಲೂಕಿನ ಕೇಂದ್ರ ಸ್ಥಾನದ ಮ.ಮ.ವನ್ಯಜೀವಿ ವಿಭಾಗದ ಕಛೇರಿ ಆವರಣ ಹಾಗೂ ವಸತಿ ಗೃಹಗಳಿಗೆ ತೆರಳುವಲ್ಲಿಗೆ ನೂತನವಾಗಿ ನಿರ್ಮಿಸುತ್ತಿರುವ ಸುಮಾರು 12 ಲಕ್ಷ ರೂ ಡಾಂಬರ್ ರಸ್ತೆ ಕಾಮಗಾರಿಗೆ ಯಾವುದೇ ಟೆಂಡರ್ ಕರೆಯದೆ ಒಳ ಒಪ್ಪಂದ ಮಾಡಿಕೊಂಡು ಪಕ್ಕದ ಕಾವೇರಿ ವನ್ಯಜೀವಿ ವಿಭಾಗದ ಕಛೇರಿ ಆವರಣದ ರಸ್ತೆಯಲ್ಲಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನಿಗೆ ನೀಡುವ ಮೂಲಕ ನಿಯಮವನ್ನು ಉಲ್ಲಂಘಿಸಿ ಅವ್ಯಾವಹಾರ ಮಾಡಲಾಗಿದೆ.

ಈ ಎರಡೂ ವಿಭಾಗಗಳಲ್ಲೂ ಆನೆ ಕಂದಕ ಕಾಮಗಾರಿಯನ್ನು ಹೊರತುಪಡಿಸಿ ಬಹುತೇಕ ಕಾಮಗಾರಿಗಳಿಗೆ ಟೆಂಡರ್ ಕರೆಯದೆ. ಬದಲಿಗೆ ಆಯಾ ವಲಯ ಅರಣ್ಯಾಧಿಕಾರಿಗಳೆ ಬೇನಾಮಿ ಗುತ್ತಿಗೆದಾರರಾಗಿದ್ದರೆ ಈ ಇಬ್ಬರು ಕಮೀಷನ್ ಏಜೆಂಟರಾಗಿದ್ದಾರೆ ಎಂದು ಇಲಾಖಾ ಮಂದಿಯೇ ಮಾತನಾಡುತ್ತಿದ್ದಾರೆ.

ವನ್ಯಜೀವಿ ಹಾಗೂ ಅರಣ್ಯ ರಕ್ಷಣೆಯನ್ನು ಕಡೆಗಣಿಸಿ ತಮಗೆ ಬೇಕಾದ ಅರಣ್ಯ ಗುತ್ತಿಗೆದಾರರ ಹೆಸರಿನಲ್ಲಿ ತಾವೇ ಆಳುಗಳನ್ನು ಬಿಟ್ಟುಕೊಂಡು ತರಾತುರಿಯಲ್ಲಿ ಕಾಟಚಾರದ ಕಳಪೆ ಕಾಮಗಾರಿ ನಡೆಸಿ ನಂತರದಲ್ಲಿ ಗುತ್ತಿಗೆದಾರರ ಹೆಸರಿನಲ್ಲಿ ಬಿಲ್ ಮಾಡಿ ಅವರಿಗೆ ಇಂತಿಷ್ಟು ಎಂದು ಪರ್ಸೆಂಟೇಜ್ ನೀಡಿ ತಾವು ಹೆಚ್ಚಿನ ಪಾಲು ಕಬಳಿಸುತ್ತಿದ್ದಾರೆ.

ಹಿರಿಯ ಅಧಿಕಾರಿಗಳಿಗೆ ಕಮೀಷನ್ ನೀಡಿ ದಂಧೆ ನಡೆಸುವ ಮೂಲಕ ಲಾಭದಾಯಕ ಹುದ್ದೆಯಲ್ಲಿ ನಿರತರಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಲ್ ಮಾಡಿಕೊಂಡಿರುವ ಗುತ್ತಿಗೆದಾರರನ್ನು ವಿಚಾರಣೆಗೊಳಪಡಿಸಿದರೆ ಎಲ್ಲಿ ಕಾಮಗಾರಿ ನಡೆದಿದೆ ಎಂಬುದು ಅವರಿಗೆ ತಿಳಿದಿಲ್ಲ.

ಹಾಗೂ ಇನ್ನು ನೆಡುತೋಪುಗಳನ್ನು ಮಾಡದಿದ್ದರೂ ಆ ಬಾಬತ್ತಿನಿಂದಲೂ ಹಣ ಬಿಡುಗಡೆಗೊಳಿಸಕೊಳ್ಳಲಾಗುತ್ತಿದೆ. ನಂತರ ಈ ಬಗ್ಗೆ ಹಿರಿಯ ಅಧಿಕಾರಿಗಳು ಆಕಸ್ಮಾತ್ ಸ್ಥಳ ಪರಿಶೀಲನೆಗೆ ಮುಂದಾಗಿ ಕೇಳಿದರೆ ಹಾಕಿದ್ದೆವು ಬಿಸಿಲಿಗೆ ಒಣಗಿ ಹೋಗಿವೆ ಎಂದು ಇಲ್ಲಸಲ್ಲದ ಸಬೂಬು ಹೇಳಿ ಯಾವುದೋ ಕಾಲದ ಹಳೆಯ ಗುಂಡಿಗಳನ್ನು ತೋರಿಸಿ ಬಚಾವಾಗುತ್ತಾರೆ. ಮೊದಲೇ ಗಿಡಗಳನ್ನು ನೆಡದಿದ್ದರೂ ನಿರ್ವಹಣೆ ಮಾಡಿದಂತೆಯೂ ಸುಳ್ಳು ಲೆಕ್ಕ ತೋರಿಸಿ ಹಣದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.

        ಸುಮಾರು 4 ಲಕ್ಷ ಅಂದಾಜಿನ ಕಾಮಗಾರಿಯನ್ನು ಸ್ಥಳೀಯ ಗಾರೆ ಕೆಲಸದವರಿಗೆ 2 ಲಕ್ಷ ರೂಗಳಿಗೆ ಒಟ್ಟು ಗುತ್ತಿಗೆ ನೀಡಿ ಉಳಿಕೆ 2 ಲಕ್ಷ ರೂನಂತೆ ಹಲವಾರು ಕಾಮಗಾರಿಗಳಲ್ಲಿ ಲಕ್ಷಾಂತರ ರೂ ಬಿಡುಗಡೆಗೊಳಿಸಿ ಡ್ರಾ ಮಾಡಲಾಗಿದೆ. ತಾಲೂಕಿನ ಈ ಎರಡೂ ವಿಭಾಗಗಳ ಅಧಿಕಾರಿಗಳ ಅವಧಿಯಲ್ಲಿ ನಡೆದಿರುವ ಸಂಪೂರ್ಣ ಕಾಮಗಾರಿಗಳ ಸ್ಥಳ ಪರಿಶೀಲನೆ ಹಾಗೂ ತನಿಖೆ ನಡೆಸಿದಲ್ಲಿ ಇವರ ಬಂಡವಾಳ ಬಯಲಾಗಿ ಸತ್ಯಾಂಶ ಬೆಳಕಿಗೆ ಬರಲಿದ್ದು, ಹಿರಿಯ ಅರಣ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X