ಪುತ್ತೂರು : ಬಸವೇಶ್ವರ ಜಯಂತಿ ಆಚರಣೆ

ಪುತ್ತೂರು,ಎ.29: ಪುತ್ತೂರು ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ಶನಿವಾರ ಬಸವೇಶ್ವರ ದಿನವನ್ನು ಆಚರಿಸಲಾಯಿತು. ಸಹಾಯಕ ಆಯುಕ್ತ ರಘುನಂದನ್ ಮೂರ್ತಿ ದೀಪ ಬೆಳಗಿಸಿ, ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್ ಅನಂತಶಂಕರ, ಭೂ ಮಾಪನ ಇಲಾಖೆಯ ದಿವಾಕರ, ಉಪ ತಹಶೀಲ್ದಾರ್ ಶ್ರೀಧರ್, ಶಶಿಕಲಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯಕ್ರಮ ಸಂಘಟಿಸಿತ್ತು.
Next Story





