ಕರಾವಳಿ ಜಿಲ್ಲೆಗಳ ತುಳುನಾಡ ಪ್ರಸಿದ್ದ ನರ್ತಕ ಕಲಾವಿದ ಕೊಣಾಜೆ ಕಾಂತು ಪರವ ನಿಧನ

ಕಡಬ, ಎ.29. ಕರಾವಳಿ ಜಿಲ್ಲೆಯಾದ್ಯಂತ ತುಳುನಾಡ ದೈವಾರಾಧನೆಯ ಪ್ರಸಿದ್ದ ನರ್ತಕ ಕಲಾವಿದರಾದ ಕೊಣಾಜೆ ಗ್ರಾಮದ ಕಾಂತುಪರವ (60ವ) ಶನಿವಾರದಂದು ಸ್ವಗೃಹದಲ್ಲಿ ನಿಧನರಾದರು. ಇವರು ದ.ಕ, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೈವಾರಧಾನೆ, ನೇಮೋತ್ಸವದಲ್ಲಿ ಪ್ರಸಿದ್ದ ನರ್ತಕರಾಗಿದ್ದು ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ವಿವಿಧ ದೇವಸ್ಥಾನ, ದೈವಸ್ಥಾನಗಳ ಆಡಳಿತ ಮೊಕ್ತೇಸರರು, ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಊರ ಪರವೂರ ಸಾವಿರಾರು ಹಿತೈಷಿಗಳು ಆಗಮಿಸಿ ಸಂತಾಪ ಸೂಚಿಸಿದ್ದಾರೆ.
Next Story





